ಅಹಮದಾಬಾದ್ (ಪಿಟಿಐ): ಇಂಗ್ಲೆಂಡ್ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಅಭ್ಯಾಸ ಕ್ರಿಕೆಟ್ ಪಂದ್ಯದಲ್ಲಿ ಹರಿಯಾಣ ವಿರುದ್ಧ ಭಾರಿ ಮುನ್ನಡೆ ಪಡೆದಿದ್ದು, ಗೆಲುವಿನ ಕನಸು ಕಂಡಿದೆ.
ಸರ್ದಾರ್ ಪಟೇಲ್ ಕ್ರೀಡಾಂಗಣದ `ಬಿ~ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 118 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 187 ರನ್‌ಗಳ ಮುನ್ನಡೆ ಪಡೆದಿದ್ದ ಪ್ರವಾಸಿ ತಂಡ ಇದೀಗ ಒಟ್ಟಾರೆ ಮುನ್ನಡೆಯನ್ನು 305 ರನ್‌ಗಳಿಗೆ ವಿಸ್ತರಿಸಿದೆ.
ಇದಕ್ಕೂ ಮುನ್ನ 4 ವಿಕೆಟ್‌ಗೆ 172 ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ಹರಿಯಾಣ ತಂಡ ಮೊದಲ ಇನಿಂಗ್ಸ್‌ನಲ್ಲಿ 334 ರನ್‌ಗಳಿಗೆ ಅಲೌಟಾಯಿತು. ಆಕರ್ಷಕ ಶತಕ ಗಳಿಸಿದ ರಾಹುಲ್ ದೇವಾನ್ (143, 315 ಎಸೆತ, 17 ಬೌಂ) ಕೊನೆಯವರೆಗೂ ಅಜೇಯರಾಗಿ ಉಳಿದುಕೊಂಡರು. ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ನಿಕ್ ಕಾಂಪ್ಟನ್ (54) ಮತ್ತು ಜೊನಾಥನ್ ಟ್ರಾಟ್ (61) ಅಜೇಯ ಅರ್ಧಶತಕ ಗಳಿಸಿದರು.
ದೇವಾನ್ ಶತಕ: ರಾಹುಲ್ ದೇವಾನ್ ಅವರ ಅಜೇಯ ಶತಕ ಹರಿಯಾಣ ಇನಿಂಗ್ಸ್‌ನ ವಿಶೇಷತೆಯಾಗಿತ್ತು. ದೇವಾನ್ ಕೊನೆಯವರೆಗೂ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ಇದರಿಂದ ಹರಿಯಾಣ `ಫಾಲೋ ಆನ್~ನಿಂದ ಪಾರಾಯಿತು.
ಸ್ಕೋರ್ ವಿವರ
ಇಂಗ್ಲೆಂಡ್: ಮೊದಲ ಇನಿಂಗ್ಸ್ 118.1 ಓವರ್‌ಗಳಲ್ಲಿ 521
ಹರಿಯಾಣ: ಮೊದಲ ಇನಿಂಗ್ಸ್ 112.4 ಓವರ್‌ಗಳಲ್ಲಿ 334
(ಶುಕ್ರವಾರದ ಆಟದ ಅಂತ್ಯಕ್ಕೆ 61 ಓವರ್‌ಗಳಲ್ಲಿ 4 ವಿಕೆಟ್‌ಗೆ 172)
ರಾಹುಲ್ ದೇವಾನ್ ಔಟಾಗದೆ 143
ಸಂದೀಪ್ ಸಿಂಗ್ ಸಿ ಕುಕ್ ಬಿ ಟಿಮ್ ಬ್ರೆಸ್ನನ್ 07
ಅಮಿತ್ ಮಿಶ್ರಾ ಸಿ ಪ್ರಯರ್ ಬಿ ಸ್ಟುವರ್ಟ್ ಮೀಕರ್ 17
ಜಯಂತ್ ಯಾದವ್ ಬಿ ಸ್ಟುವರ್ಟ್ ಮೀಕರ್ 17
ಅಮಿತ್ ವಶಿಷ್ಠ ಎಲ್‌ಬಿಡಬ್ಲ್ಯು ಬಿ ಸಮಿತ್ ಪಟೇಲ್ 16
ಚಂದರ್‌ಪಾಲ್ ಸೈನಿ ಎಲ್‌ಬಿಡಬ್ಲ್ಯು ಬಿ ಸ್ಟುವರ್ಟ್ ಮೀಕರ್ 35
ಸಂಜಯ್ ಬುದ್ವಾರ್ ಸಿ ಕುಕ್ ಬಿ ಕೆವಿನ್ ಪೀಟರ್‌ಸನ್ 00
ಇತರೆ: (ಬೈ-13, ಲೆಗ್‌ಬೈ-5, ವೈಡ್-2, ನೋಬಾಲ್-2) 22
ವಿಕೆಟ್ ಪತನ: 1-28 (ಸೈನಿ; 7.6), 2-125 (ಸನ್ನಿ ಸಿಂಗ್; 36.3), 3-136 (ಖೋಡ್; 43.3), 4-163 (ರಾಣಾ; 52.1), 5-181 (ಸಂದೀಪ್; 63.3), 6-211 (ಮಿಶ್ರಾ; 73.5), 7-232 (ಯಾದವ್; 79.6), 8-272 (ವಶಿಷ್ಠ; 92.2), 9-332 (ಸಿ. ಸೈನಿ; 111.5), 10-334 (ಬುದ್ವಾರ್; 112.4)
ಬೌಲಿಂಗ್: ಗ್ರಹಾಮ್ ಆನಿಯನ್ಸ್ 20-2-66-0, ಟಿಮ್ ಬ್ರೆಸ್ನನ್ 21-4-66-3, ಸ್ಟುವರ್ಟ್ ಮೀಕರ್ 20-1-74-3, ಮಾಂಟಿ ಪನೇಸರ್ 28-8-52-1, ಸಮಿತ್ ಪಟೇಲ್ 16-4-39-2, ಕೆವಿನ್ ಪೀಟರ್‌ಸನ್ 4.4-0-12-1, ಜೊನಾಥನ್ ಟ್ರಾಟ್ 3-0-7-0
ಇಂಗ್ಲೆಂಡ್: ಎರಡನೇ ಇನಿಂಗ್ಸ್ 38 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 118
ನಿಕ್ ಕಾಂಪ್ಟನ್ ಬ್ಯಾಟಿಂಗ್ 54
ಜೊನಾಥನ್ ಟ್ರಾಟ್ ಬ್ಯಾಟಿಂಗ್ 61
ಇತರೆ: (ಲೆಗ್‌ಬೈ-2, ವೈಡ್-1) 03
ಬೌಲಿಂಗ್: ಸಂಜಯ್ ಬುದ್ವಾರ್ 9-1-25-0, ಅಮಿತ್ ವಶಿಷ್ಠ 8-2-26-0, ಸಚಿನ್ ರಾಣಾ 8-1-21-0, ಚಂದರ್‌ಪಾಲ್ ಸೈನಿ 8-2-20-0, ಅಭಿಮನ್ಯು ಖೋಡ್ 3-0-24-0, ಜಯಂತ್ ಯಾದವ್ 2-2-0-0
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.