ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪಂದ್ಯಗಳಿಗೆ ಮಳೆ ಅಡ್ಡಿ ಉಂಟುಮಾಡಿದೆ. ಈ ಕಾರಣ ಮಂಗಳವಾರ ಯಾವುದೇ ಪಂದ್ಯಗಳು ನಡೆಯಲಿಲ್ಲ.
ಬುಧವಾರ ಕೂಡಾ ಮಳೆಯ ಕಾರಣ ಪಂದ್ಯಗಳು ನಿಗದಿತ ಸಮಯದಲ್ಲಿ ಆರಂಭವಾಗಲಿಲ್ಲ. ಇದು ಟೂರ್ನಿಯ ಸಂಘಟಕರ ಚಿಂತೆಗೆ ಕಾರಣವಾಗಿದೆ. ಇದೀಗ ಅಲ್ಪ ಅವಧಿಯಲ್ಲಿ ಅಧಿಕ ಪಂದ್ಯಗಳನ್ನು ನಡೆಸುವ ಸವಾಲು ಸಂಘಟಕರ ಮುಂದಿದೆ.
ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಮತ್ತು ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಮಳೆಯ ಕಾರಣ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.