ADVERTISEMENT

ಅರ್ಜೆಂಟೀನಾ–ಹೈಟಿ ಅಭ್ಯಾಸ ಪಂದ್ಯ

ರಾಯಿಟರ್ಸ್
Published 9 ಮೇ 2018, 19:30 IST
Last Updated 9 ಮೇ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಬ್ಯೂನಸ್‌ ಐರಿಸ್‌: ಅರ್ಜೆಂಟೀನಾ ತಂಡದವರು ಫಿಫಾ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಹೈಟಿ ವಿರುದ್ಧ ಆಡಲಿದ್ದಾರೆ.

ಈ ಹೋರಾಟ ಮೇ 29ರಂದು ಬೊಕಾ ಜೂನಿಯರ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅರ್ಜೆಂಟೀನಾ ಫುಟ್‌ಬಾಲ್‌ ಸಂಸ್ಥೆ ತಿಳಿಸಿದೆ. ಜೂನ್‌ 9ರಂದು ಜರುಗುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಈ ತಂಡ ಇಸ್ರೇಲ್‌ ವಿರುದ್ಧ ಸೆಣಸಲಿದೆ.

ವಿಶ್ವಕಪ್‌ ಟೂರ್ನಿ ರಷ್ಯಾದಲ್ಲಿ ನಡೆಯಲಿದೆ. ಅರ್ಜೆಂಟೀನಾ ತಂಡ ಐಸ್‌ಲ್ಯಾಂಡ್‌, ಕ್ರೊವೇಷ್ಯಾ ಮತ್ತು ನೈಜೀರಿಯಾ ಜೊತೆ ‘ಡಿ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಈ ತಂಡ ಜೂನ್‌ 16ರಂದು ಮೊದಲ ಪಂದ್ಯ ಆಡಲಿದೆ.

ADVERTISEMENT

ವಿಶ್ವಕಪ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿರುವ ಅರ್ಜೆಂಟೀನಾ ತಂಡ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 108ನೇ ಸ್ಥಾನದಲ್ಲಿರುವ ಹೈಟಿ ತಂಡವನ್ನು ಸುಲಭವಾಗಿ ಮಣಿಸುವ ವಿಶ್ವಾಸ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.