ADVERTISEMENT

ಆರು ಗನ್‌ಗೆ ಬೇಡಿಕೆ ಇಟ್ಟಿದ್ದ ಆಸ್ಕರ್‌ ಪಿಸ್ಟೋರಿಯಸ್‌

ಪ್ರೇಯಸಿ ಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಪ್ರಿಟೋರಿಯಾ (ಎಎಫ್‌ಪಿ): ತನ್ನ ಪ್ರೇಯಸಿಯನ್ನು  ಹತ್ಯೆಗೈದಿದ್ದ   ದಕ್ಷಿಣ ಆಫ್ರಿಕಾದ ಅಥ್ಲೀಟ್‌ ಆಸ್ಕರ್‌ ಪಿಸ್ಟೋರಿಯಸ್‌ ಹತ್ಯೆಯ ದಿನ ಆರು ಗನ್‌ ಒದಗಿಸುವಂತೆ ಗನ್‌ ಪರವಾನಗಿ ದಾರನಲ್ಲಿ ಕೋರಿದ್ದ ಎಂಬ  ಅಂಶ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಇದು ಇಲ್ಲಿನ ಕಾನೂನಿನ ಪ್ರಕಾರ ಅಪರಾಧ.

ಮಂಗಳವಾರ ಪ್ರಕರಣದ ಸಂಬಂಧ ವಿಚಾರಣೆ ನಡೆದಿದ್ದು, 2013ರ ಫೆಬ್ರುವರಿ 14ರಂದು ತನ್ನ ಪ್ರೇಯಸಿ ರೀವಾ ಸ್ಟೀನ್‌ಕಾಂಪ್‌ ಅವರನ್ನು ಹತ್ಯೆ ಮಾಡುವ ಮುನ್ನ ಆತ ಮೂರು ಶಾಟ್‌ಗನ್‌, ಎರಡು ರಿವಾಲ್ವರ್‌ ಹಾಗೂ ಒಂದು ರೈಫಲ್‌ ಪೂರೈಸು ವಂತೆ ಬೇಡಿಕೆ ಇಟ್ಟಿದ್ದ ಎಂದು ಗನ್‌ ಪರವಾನಗಿದಾರ ಸೀನ್‌ ರೆನ್ಸ್‌ ಸಾಕ್ಷ ನುಡಿದಿದ್ದಾನೆ. ಘಟನೆ ಜರುಗಿ ಒಂದು ತಿಂಗಳ ನಂತರ ಈ ಬೇಡಿಕೆಯನ್ನು ಪಿಸ್ಟೋರಿಯಸ್‌ ರದ್ದುಗೊಳಿಸಿದ್ದ ಎಂಬ ಅಂಶವನ್ನೂ ರೆನ್ಸ್‌  ತಿಳಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.