ದಾವಣಗೆರೆ: ಮಂಗಳೂರಿನ ಫಾದರ್ ಮುಲ್ಲರ್ಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ತಂಡ ನಗರದಲ್ಲಿ ರಾಜೀವಗಾಂಧಿ ಆರೋಗ್ಯ ವಿವಿ ಮತ್ತು ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಆಶ್ರಯದಲ್ಲಿ ನಡೆದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಅಂತರಕಾಲೇಜು ಅಥ್ಲೆಟಿಕ್ ಕೂಟದಲ್ಲಿ ಸೋಮವಾರ 26 ಪಾಯಿಂಟ್ಸ್ ಗಳಿಸಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.
ಮಹಿಳಾ ವಿಭಾಗದಲ್ಲಿ ಇದೇ ತಂಡದ ವೆರೊನಿಕಾ ಲೋಬೋ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇತರ ಸ್ಪರ್ಧೆಗಳ ಫಲಿತಾಂಶ: ಪುರುಷರ ವಿಭಾಗ: ಟ್ರಿಪಲ್ ಜಂಪ್: ಕಾರ್ಲ್ ಬ್ರಿಟ್ಟೋ (ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಬೆಂಗಳೂರು) (ದೂರ 14.30 ಮೀ)-1, ಇ.ವಿ. ಜಿತಿನ್ (ಎಜೆಐಎಂಎಸ್, ಮಂಗಳೂರು) (ದೂರ 12.36 ಮೀ )-2, ಎಂ.ವಿ.ಎಸ್. ಕೇಶವ (ಎಸ್‌ಡಿಎಂಸಿ, ಹಾಸನ) (ದೂರ 12.24 ಮೀ)-3.
ಹ್ಯಾಮರ್ ಥ್ರೋ: ಕೃಪಾಲ್ (ಕೆವಿಜಿ ಡೆಂಟಲ್ ಕಾಲೇಜು, ಸುಳ್ಯ) (ದೂರ 31.94 ಮೀ. )-1, ನಿವಿನ್ (ಜೆಜೆಎಂ ಮೆಡಿಕಲ್ ಕಾಲೇಜು, ದಾವಣಗೆರೆ) (ದೂರ 18.63 ಮೀ. )-2, ಸಂತೋಷ್ ಕೃಷ್ಣನ್ (ಎಸ್‌ಎಸ್‌ಐಎಂಎಸ್‌ಆರ್, ದಾವಣಗೆರೆ) (ದೂರ 17.08 ಮೀ) -3.
200 ಮೀ ಓಟ: ಇ.ವಿ. ಜಿತಿನ್ (ಎಜೆಐಎಂಎಸ್, ಮಂಗಳೂರು) (ಕಾಲ 24.32 ಸೆ.) -1, ಝಕಿಯಾಲಾಟೋ (ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ) (ಕಾಲ 24.50 ಸೆ.)-2, ಕೆ.ಪಿ. ಸಲ್ಮಾನ್ (ನವೋದಯ ಡೆಂಟಲ್ ಕಾಲೇಜು, ರಾಯಚೂರು) (ಕಾಲ 24.59 ಸೆ.)-3
ಹೈಜಂಪ್: ಪಿ. ರೋಹಿತ್ (ಎಜೆಐಡಿಎಸ್‌ಸಿ, ಮಂಗಳೂರು) (ಎತ್ತರ 1.59 ಮೀ)-1, ಷಫೀಕ್ (ಎಜೆಐಎಂಎಸ್, ಮಂಗಳೂರು) (ಎತ್ತರ 1.56 ಮೀ)-2, ಮಹಮದ್ ಸಫೀರ್ (ಎಫ್‌ಎಂಎಚ್‌ಸಿ, ಮಂಗಳೂರು) (ಎತ್ತರ 1.50 ಮೀ.)-3.
800 ಮೀ ಓಟ: ಅನೂಪ್ ಶಾಸ್ತ್ರಿ (ಎಸ್‌ಎಸ್‌ಐಎಂಎಸ್‌ಆರ್, ದಾವಣಗೆರೆ) (ಕಾಲ 2.12.29 ಸೆ.)-1, ಎಂ.ಪಿ. ಷಫೀಕ್(ಎಜೆಐಎಂಎಸ್, ಮಂಗಳೂರು) (ಕಾಲ; 2.18.50 ಸೆ.)-2, ತೇಜಸ್ (ನವೋದಯ ಕಾಲೇಜು, ರಾಯಚೂರು) (ಕಾಲ 2.19 ಸೆ.)-3.
400 ಮೀ ಹರ್ಡಲ್ಸ್: ಸೋಮಪ್ಪ ರಾಥೋಡ್ (ಬಿಐಎಂಎಸ್, ಬೀದರ್) (ಕಾಲ 1.04.63 ಸೆ.)-1, ಪಿ. ರೋಹಿತ್ (ಎಜೆಐಎಸ್, ಮಂಗಳೂರು) (ಕಾಲ 1.08.84 ಸೆ.)-2, ಬಿ. ಬಸವರಾಜ್ (ಎಚ್‌ಕೆಇಎಸ್, ಗುಲ್ಬರ್ಗ) (ಕಾಲ 1.08.85 ಸೆ)-3
4್ಡ400 ಮೀ ರಿಲೇ: ಎಸ್‌ಎಸ್‌ಐಎಂಎಸ್ ದಾವಣಗೆರೆ (ಕಾಲ 3.49.34 ಸೆ.)-1, ಎಫ್‌ಎಂಎಚ್‌ಎಂಸಿ, ಮಂಗಳೂರು (ಕಾಲ 3.50.56 ಸೆ.)-2, ಕಿಮ್ಸ, ಹುಬ್ಬಳ್ಳಿ (ಕಾಲ 4.07.43 ಸೆ.)-3.
ಮಹಿಳಾ ವಿಭಾಗ: ಹೈಜಂಪ್: ಚೈತ್ರಶ್ರೀ (ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜು, ಶಿವಮೊಗ್ಗ) (ಎತ್ತರ 1.25 ಮೀ) -1, ವೆರೊನಿಕಾ ಲೋಬೋ (ಎಪ್‌ಎಂಎಂಸಿ, ಮಂಗಳೂರು) (ಎತ್ತರ 1.20 ಮೀ.)-2, ಕೆ. ಸೃಜನಾ (ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪಥಿ, ಮೂಡಬಿದ್ರಿ), ಎಸ್. ಅರ್ಚನಾ (ಜೆಜೆಎಂಸಿ, ದಾವಣಗೆರೆ) (ಎತ್ತರ -ಇಬ್ಬರದೂ) 1.20 ಮೀ.)-2
ಹ್ಯಾಮರ್ ಥ್ರೋ: ಸುಪ್ರತಿ ಎ. ಶೆಟ್ಟಿ (ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪಥಿ) (ದೂರ 24.26 ಮೀ.)-1, ಆಶ್ಲಿಮ್ಯಾಥ್ಯೂ (ಸಹ್ಯಾದ್ರಿ ಕಾಲೇಜ್ ಆಫ್ ನರ್ಸಿಂಗ್, ಮಂಗಳೂರು) (ದೂರ 20.92 ಮೀ.)-2, ಮಿನು ಸೆಬಾಸ್ಟಿಯನ್ (ಎಫ್‌ಎಂಎಚ್‌ಎಂಸಿ, ಮಂಗಳೂರು) (ದೂರ 20.89 ಮೀ.)-3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.