ADVERTISEMENT

ಆರ್‌ಡಬ್ಲ್ಯುಎಫ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 19:43 IST
Last Updated 8 ಡಿಸೆಂಬರ್ 2017, 19:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಉಮೇಶ್ ತಂದಿತ್ತ ಎರಡು ಗೋಲುಗಳ ಬಲದಿಂದ ಆರ್‌ಡಬ್ಲ್ಯುಎಫ್‌ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕನೇ ಆವೃತ್ತಿಯ ಹಾಕಿ ಲೀಗ್‌ ಪಂದ್ಯದಲ್ಲಿ ಜಯ ದಾಖಲಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್‌ ತಂಡ 4–2 ಗೋಲುಗಳಲ್ಲಿ ಎಮ್‌ಎಲ್‌ಐಆರ್‌ಸಿ ತಂಡವನ್ನು ಮಣಿಸಿತು. ವಿಜಯೀ ತಂಡದ ಉಮೇಶ್‌ 13 ಮತ್ತು 39ನೇ ನಿಮಿಷದಲ್ಲಿ ಎರಡು ಗೋಲು ದಾಖಲಿಸಿದರು. ಸುಶೀಲ್‌ (17ನೇ ನಿ.) ಹಾಗೂ ಆಂಜನೇಯ (68ನೇ ನಿ.) ತಲಾ ಒಂದು ಗೋಲು ತಂದುಕೊಟ್ಟರು.

ಎಮ್‌ಎಲ್‌ಐಆರ್‌ಸಿ ತಂಡದ ಅಕ್ಷಯ್‌ (46ನೇ ನಿ.), ಗಣೇಶ್ ಪಾಟೀಲ್ (65ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.