ADVERTISEMENT

ಆರ್ಮಿ ರೆಡ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ಬೆಂಗಳೂರು: ಆರ್ಮಿ ರೆಡ್ ತಂಡದವರು ಕೆಎಸ್‌ಎಚ್‌ಎ ಆಶ್ರಯದ `ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್~ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್ಮಿ ರೆಡ್ 3-1 ಗೋಲುಗಳಿಂದ ಐಎಎಫ್ ತಂಡವನ್ನು ಮಣಿಸಿತು. ಸುನಿಲ್ ಎಕ್ಕಾ (13ನೇ ನಿಮಿಷ), ರಾಕೇಶ್ ಕುಮಾರ್ (25) ಮತ್ತು ಎಸ್. ಆರ್ಮುಗಂ (53) ವಿಜಯಿ ತಂಡದ ಪರ ಗೋಲು ಗಳಿಸಿದರು.

ಐಎಎಫ್ ತಂಡದ ಏಕೈಕ ಗೋಲನ್ನು ಎಸ್. ಆಲಮ್ ಪಂದ್ಯದ 14ನೇ ನಿಮಿಷದಲ್ಲಿ ತಂದಿತ್ತರು. ವಿರಾಮದ ವೇಳೆಗೆ ಆರ್ಮಿ ರೆಡ್ 2-1 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು.

ಇಂದಿನ ಪಂದ್ಯಗಳು: ಫೋರ್ಟಿಸ್- ಎಸ್‌ಎಐ (ಮಧ್ಯಾಹ್ನ 1.30ಕ್ಕೆ ಆರಂಭ), ಬಿಪಿಸಿಎಲ್- ಎಂಇಜಿ `ಎ~ (ಮಧ್ಯಾಹ್ನ 3.00), ಐಒಸಿಎಲ್- ಆರ್ಮಿ ಗ್ರೀನ್ (ಸಂಜೆ 4.30)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.