
ಮೆಲ್ಬರ್ನ್ (ಏಜೆನ್ಸೀಸ್): ಭಾರತ– ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 295 ರನ್ ಕಲೆಹಾಕಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತ್ತು. ವಿರಾಟ್ ಕೊಹ್ಲಿ 117 ಬಾಲ್‌ಗಳಿಗೆ 117 ರನ್ ಸಿಡಿಸಿದರು. ಶಿಖರ್ ಧವನ್ 91 ಎಸೆತಗಳಲ್ಲಿ 68 ರನ್ ಕಲೆಹಾಕಿದರು.
ಅಜಿಂಕ್ಯ ರಹಾನೆ 55 ಬಾಲ್‌ಗಳಲ್ಲಿ ಅರ್ಧ ಶತಕ ಗಳಿಸಿ ಔಟಾದರು. ನಾಯಕ ಮಹೇಂದ್ರ ಸಿಂಗ್ ದೋನಿ 9 ಬಾಲ್‌ಗಳಲ್ಲಿ 23 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಕೊಹ್ಲಿ ದಾಖಲೆ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿದರು. ಏಕದಿನ ಪಂದ್ಯಗಳಲ್ಲಿ ಏಳು ಸಾವಿರ ರನ್ ಗಳಿಸಿ, ಈ ಹಿಂದಿನ ಎ.ಬಿ.ಡಿವಿಲಿಯರ್ಸ್ ದಾಖಲೆ ಮುರಿದರು. 24ನೇ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಪೂರೈಸಿದ ದಾಖಲೆಯನ್ನೂ ಕೊಹ್ಲಿ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.