ADVERTISEMENT

ಆಸೀಸ್- ವಿಂಡೀಸ್ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ಪೋರ್ಟ್ ಆಫ್ ಸ್ಪೇನ್ (ಐಎಎನ್‌ಎಸ್/ ಸಿಎಂಸಿ): ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಿರೀಕ್ಷೆಯಂತೆಯೇ ಡ್ರಾದಲ್ಲಿ ಅಂತ್ಯ ಕಂಡಿದೆ. ಅಂತಿಮ ದಿನವಾದ ಗುರುವಾರ ಕೂಡಾ ಆಟಕ್ಕೆ ಮಳೆ ಅಡ್ಡಿಪಡಿಸಿತು.

ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ ವಿಂಡೀಸ್ 59 ಓವರ್‌ಗಳಲ್ಲಿ 215 ರನ್ ಗಳಿಸಬೇಕಿತ್ತು. ಆತಿಥೇಯ ತಂಡ 11 ಓವರ್‌ಗಳಲ್ಲಿ 2 ವಿಕೆಟ್‌ಗೆ 53 ರನ್ ಗಳಿಸಿದ್ದ ಸಂದರ್ಭ ಮಳೆ ಸುರಿದ ಕಾರಣ ದಿನದಾಟವನ್ನು ರದ್ದುಗೊಳಿಸಲಾಯಿತು.

ಇದಕ್ಕೂ ಮುನ್ನ 3 ವಿಕೆಟ್‌ಗೆ 73 ರನ್‌ಗಳಿಂದ ಆಟ ಮುಂದುವರಿಸಿದ ಆಸೀಸ್ 61.5 ಓವರ್‌ಗಳಲ್ಲಿ 8 ವಿಕೆಟ್‌ಗೆ 160 ರನ್ ಗಳಿಸಿ ತನ್ನ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದರಿಂದ ಪಂದ್ಯ ಕುತೂಹಲಕಾರಿ ಅಂತ್ಯ ಕಾಣುವ ಸಾಧ್ಯತೆಯಿತ್ತು. ಆದರೆ ಮಳೆ ಅದಕ್ಕೆ ಅವಕಾಶ ನೀಡಲಿಲ್ಲ.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 135 ಓವರುಗಳಲ್ಲಿ 311 ಮತ್ತು ಎರಡನೇ ಇನಿಂಗ್ಸ್ 61.5 ಓವರ್‌ಗಳಲ್ಲಿ 8 ವಿಕೆಟ್‌ಗೆ 160 (ರಿಕಿ ಪಾಂಟಿಂಗ್ 41, ಮ್ಯಾಥ್ಯೂ ವೇಡ್ ಔಟಾಗದೆ 31, ಕೆಮರ್ ರೋಷ್ 41ಕ್ಕೆ 5, ಡರೆನ್ ಸಾಮಿ 17ಕ್ಕೆ 1). ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 104.4 ಓವರ್‌ಗಳಲ್ಲಿ  257 ಮತ್ತು ಎರಡನೇ ಇನಿಂಗ್ಸ್ 11 ಓವರ್‌ಗಳಲ್ಲಿ 2 ವಿಕೆಟ್‌ಗೆ 53 (ಡರೆನ್ ಸಾಮಿ ಔಟಾಗದೆ 30, ಡರೆನ್ ಬೆನ್ ಹಿಲ್ಫೆನಾಸ್ 22ಕ್ಕೆ 2).
ಫಲಿತಾಂಶ: ಡ್ರಾ, ಪಂದ್ಯಶ್ರೇಷ್ಠ: ಕೆಮರ್ ರೋಷ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.