ADVERTISEMENT

ಆಸ್ಟ್ರೇಲಿಯಾಕ್ಕೆ ರೋಚಕ ಗೆಲುವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಬ್ರಿಜ್‌ಟೌನ್ (ಪಿಟಿಐ): ನಿರೀಕ್ಷೆಯಂತೆ ರೋಚಕ ತಿರುವು ಪಡೆದ ಪ್ರಥಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದವರು 3 ವಿಕೆಟ್‌ಗಳ ಅಂತರದಿಂದ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಿದರು.ಪ್ರಥಮ ಇನಿಂಗ್ಸ್‌ನಲ್ಲಿ 43 ರನ್‌ಗಳಿಂದ ಮುನ್ನಡೆ ಸಾಧಿಸಿದರೂ, ಆತಿಥೇಯ ವಿಂಡೀಸ್ ಪಂದ್ಯದ ಮೇಲೆ ಹಿಡಿತ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ಎರಡನೇ ಇನಿಂಗ್ಸ್‌ನಲ್ಲಿ ತಡಬಡಾಯಿಸಿದ ಡರೆನ್ ಸಾಮಿ ಬಳಗವು ಸಂಕಷ್ಟಕ್ಕೆ ಸಿಲುಕಿತು. ನಾಲ್ಕನೇ ದಿನದಾಟದ ಕೊನೆಗೆ ಐದು ವಿಕೆಟ್ ಕಳೆದುಕೊಂಡು 71 ರನ್ ಗಳಿಸಿದ್ದ ಕೆರಿಬಿಯನ್ನರು ಗುರುವಾರದ ಆಟದಲ್ಲಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ. 66.4 ಓವರುಗಳಲ್ಲಿ 148 ರನ್ ಗಳಿಸುವಷ್ಟರಲ್ಲಿ ಬಾಕಿ ಐದು ವಿಕೆಟ್‌ಗಳೂ ಪತನಗೊಂಡವು.

ಗೆಲ್ಲಲು 192 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 47 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು ಜಯದ ದಡ ಸೇರಿತು. ಶೇನ್ ವ್ಯಾಟ್ಸನ್ (52; 93 ನಿಮಿಷ, 57 ಎಸೆತ, 4 ಬೌಂಡರಿ, 1 ಸಿಕ್ಸರ್) ಅವರ ವಿಶ್ವಾಸಪೂರ್ಣ ಆಟವು ಆಸ್ಟ್ರೇಲಿಯಾ ಗೆಲುವಿಗೆ ಸಹಕಾರಿ ಆಯಿತು.   

ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 9 ವಿಕೆಟ್‌ಗಳ ನಷ್ಟಕ್ಕೆ 449 ಡಿಕ್ಲೇರ್ಡ್‌ ಹಾಗೂ 66.4 ಓವರುಗಳಲ್ಲಿ  148 (ಕಾರ್ಲಟನ್ ಬಾ 23, ಡರೆನ್ ಸಾಮಿ 14, ಕೆಮರ್ ರೋಷ್ 25; ಬೆನ್ ಹಿಲ್ಫೆನ್ಹಾಸ್ 27ಕ್ಕೆ4, ರ‌್ಯಾನ್ ಹ್ಯಾರಿಸ್ 31ಕ್ಕೆ3, ಪೀಟರ್ ಸಿಡ್ಲ್ 32ಕ್ಕೆ2);

ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 9 ವಿಕೆಟ್‌ಗಳ ನಷ್ಟಕ್ಕೆ 406 ಡಿಕ್ಲೇರ್ಡ್‌ ಹಾಗೂ 47 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 192 (ಡೇವಿಡ್ ವಾರ್ನರ್ 22, ಎಡ್ ಕೋವನ್ 34, ಶೇನ್ ವ್ಯಾಟ್ಸನ್ 52, ಮೈಕಲ್ ಹಸ್ಸಿ 32, ಮ್ಯಾಥ್ಯೂ ವೇಡ್ 18; ಕೆಮರ್ ರೋಷ್ 45ಕ್ಕೆ2, ನರಸಿಂಗ ಡಿಯೊನಾರಾಯಣ 53ಕ್ಕೆ4); ಫಲಿತಾಂಶ: ಆಸ್ಟ್ರೇಲಿಯಾಕ್ಕೆ 3 ವಿಕೆಟ್‌ಗಳ ಗೆಲುವು; ಪಂದ್ಯ ಶ್ರೇಷ್ಠ: ರ‌್ಯಾನ್ ಹ್ಯಾರಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.