ADVERTISEMENT

ಆಸ್ಟ್ರೇಲಿಯಾ ಓಪನ್‌ ಟೂರ್ನಿ ಕನಸು ಭಗ್ನ

ಸಾಕೇತ್‌ ಮೈನೇನಿಗೆ ಮೂರನೇ ಸುತ್ತಿನಲ್ಲಿ ಸೋಲು

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 19:40 IST
Last Updated 16 ಜನವರಿ 2016, 19:40 IST
ಭಾರತದ ಸಾಕೇತ್ ಮೈನೇನಿ ಆಟದ ವೈಖರಿ
ಭಾರತದ ಸಾಕೇತ್ ಮೈನೇನಿ ಆಟದ ವೈಖರಿ   

ಮೆಲ್ಬರ್ನ್‌ (ಪಿಟಿಐ): ಭಾರತದ ಸಾಕೇತ್‌ ಮೈನೇನಿ ಶನಿವಾರ ಇಲ್ಲಿ ನಡೆದ  ಆಸ್ಟ್ರೇಲಿಯಾ ಓಪನ್‌ ಅರ್ಹತಾ ಸುತ್ತಿನ ಅಂತಿಮ ಘಟ್ಟ ದಾಟುವಲ್ಲಿ ವಿಫಲರಾಗಿದ್ದಾರೆ.

ಮೂರನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ಸಾಕೇತ್‌ ಮೈನೇನಿ 6–3, 4–6, 6–8ರಲ್ಲಿ ಬೋಸ್ನಿಯಾ ಮತ್ತು ಹರ್ಜೆಗೊವೇನಿಯಾದ ಮಿರ್ಜಾ ಬೇಸಿಕ್‌ ಎದುರು ಸೋಲು ಅನುಭವಿಸುವ ಮೂಲಕ ಮುಖ್ಯ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

2 ಗಂಟೆ ಆರು ನಿಮಿಷ ನಡೆದ ಕಠಿಣ ಪೈಪೋಟಿಯಲ್ಲಿ ಮೊದಲ ಸೆಟ್‌ ಗೆದ್ದು ಉತ್ತಮ ಆರಂಭ ಪಡೆದಿದ್ದ ಮೈನೇನಿ ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಎಂದಿನ ಆಟ ಆಡಲು ಸಾಧ್ಯವಾಗದೆ ಸೋಲು ಕಂಡರು.

ನಿರ್ಣಾಯಕ ಸೆಟ್‌ನಲ್ಲಿ ಮೈನೇನಿಗೆ ಐದು ಬ್ರೇಕ್‌ ಪಾಯಿಂಟ್‌ ಪಡೆಯುವ ಅವಕಾಶ ಇತ್ತು. ಆದರೆ ಒಂದರಲ್ಲಿ ಮಾತ್ರ ಯಶಸ್ಸು ಪಡೆದರು. ಎರಡು ಬಾರಿ ಎದುರಾಳಿಗೆ ಸರ್ವ್ ಬಿಟ್ಟು ಕೊಟ್ಟರು.

ಮೈನೇನಿ ಅವರ ಸೋಲಿನೊಂದಿಗೆ ಆಸ್ಟ್ರೇಲಿಯಾ ಓಪನ್‌ ಪುರುಷರ ಸಿಂಗಲ್ಸ್‌ ವಿಭಾಗದ ಮುಖ್ಯ ಸುತ್ತಿನಲ್ಲಿ ಭಾರತದ ಯೂಕಿ ಭಾಂಬ್ರಿ ಮಾತ್ರ ಆಡಲಿದ್ದಾರೆ. ಮೊದಲ ಸುತ್ತಿನಲ್ಲಿ ಯೂಕಿ ಭಾಂಬ್ರಿ  ಅವರು ಥಾಮಸ್‌ ಬರ್ಡಿಕ್‌ ಅವರ ಸವಾಲು ಎದುರಿ ಸಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯೂಕಿ ‘ಮೊದಲ ಸುತ್ತಿನಲ್ಲೇ ವಿಶ್ವ ರ್‍ಯಾಂಕಿಂಗ್‌ ನಲ್ಲಿ 10ನೇ ಸ್ಥಾನದಲ್ಲಿರುವ ಆಟಗಾರ ನೊಂದಿಗೆ ಆಡುವುದರಿಂದ ಸಂತೋಷ ವಾಗಿದೆ. ಇದೊಂದು ಕಠಿಣ ಡ್ರಾ. ಆದರೆ ನಾನು ಇಲ್ಲಿ ಕಲಿಯುವುದು ಸಾಕಷ್ಟು ಇದೆ. ನನಗೆ ಸಿಕ್ಕ ಅತ್ಯುತ್ತಮ ಅವಕಾಶ ದಲ್ಲಿ ಉತ್ತಮ ಸಾಮರ್ಥ್ಯ ದೊಂದಿಗೆ ಆಡಲಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.