ADVERTISEMENT

ಇಂದಿನಿಂದ ಐಪಿಎಲ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 19:30 IST
Last Updated 7 ಏಪ್ರಿಲ್ 2011, 19:30 IST

ಚೆನ್ನೈ (ಪಿಟಿಐ): ಮನರಂಜನೆ ಹಾಗೂ ಹಣದ ಹೊಳೆಯನ್ನೇ ಹರಿಸಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಶುಕ್ರವಾರ ಚಾಲನೆ ಲಭಿಸಲಿದೆ.

ಇಂದಿನ ಪಂದ್ಯ

ಚೆನ್ನೈ ಸೂಪರ್ ಕಿಂಗ್ಸ್/ ಕೋಲ್ಕತ್ತ ನೈಟ್ ರೈಡರ್ಸ್

ಸ್ಥಳ : ಚೆನ್ನೈ

ಆರಂಭ: ರಾತ್ರಿ 8.00ಕ್ಕೆ

ನೇರ ಪ್ರಸಾರ: ಸೆಟ್‌ಮ್ಯಾಕ್ಸ್

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸಂಜೆ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

ADVERTISEMENT

ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಕೊನೆಗೊಂಡು ಕೇವಲ ಆರು ದಿನಗಳು ಕಳೆದಿವೆ. ಅದರ ಬೆನ್ನಲ್ಲೇ ಮತ್ತೊಂದು ಕ್ರಿಕೆಟ್ ಹಬ್ಬ ಆಗಮಿಸಿದೆ. ಮುಂದಿನ 51 ದಿನಗಳ ಕಾಲ ಅಭಿಮಾನಿಗಳಿಗೆ ‘ಫಟಾಫಟ್’ ಕ್ರಿಕೆಟ್‌ನ ಸಿಹಿ ಸವಿಯಬಹುದು.

ವಿಶ್ವಕಪ್ ವೇಳೆ ಗಂಭೀರ ಕ್ರಿಕೆಟ್‌ನ ಮಜಾ ಅನುಭವಿಸಿದ್ದ ಅಭಿಮಾನಿಗಳಿಗೆ ಐಪಿಎಲ್ ಟೂರ್ನಿಯುದ್ದಕ್ಕೂ ಮನರಂಜನೆ ಮಿಶ್ರಿತ ಆಟವನ್ನು ನೋಡಬಹುದು. ಬ್ಯಾಟ್ಸ್‌ಮನ್‌ಗಳ ಮೇಲಾಟ, ಚಿಯರ್ ಗರ್ಲ್ಸ್ ತಂಡದ ಬೆಡಗಿಯರ ಕುಣಿತ, ಅಬ್ಬರದ ಸಂಗೀತವು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಮನ ತಣಿಸಲಿದೆ.

ಐಪಿಎಲ್ ಚಾಂಪಿಯನ್ನರು
2008- ರಾಜಸ್ತಾನ ರಾಯಲ್ಸ್

2009- ಡೆಕ್ಕನ್ ಚಾರ್ಜರ್ಸ್

2010- ಚೆನ್ನೈ ಸೂಪರ್ ಕಿಂಗ್ಸ್

ಈ ಬಾರಿಯ ಟೂರ್ನಿಯಲ್ಲಿ 10 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ವೊದಲ ಮೂರು ವರ್ಷಗಳ ಅವಧಿಯಲ್ಲಿ ಕಣದಲ್ಲಿ ಎಂಟು ತಂಡಗಳಿದ್ದವು. ಇದೀಗ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಪುಣೆ ವಾರಿಯರ್ಸ್ ತಂಡಗಳು ಹೊಸದಾಗಿ ಸೇರಿಕೊಂಡಿವೆ.

ಹೆಚ್ಚಿನ ತಂಡಗಳು ನೂತನ ನಾಯಕನನ್ನು ನೇಮಿಸಿವೆ. ಮಾತ್ರವಲ್ಲ ಹೊಸ ರೂಪ ಪಡೆದುಕೊಂಡಿವೆ. ಶುಕ್ರವಾರ ಸಂಜೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಶಾರೂಖ್ ಖಾನ್ ಒಳಗೊಂಡಂತೆ ಬಾಲಿವುಡ್‌ನ ಪ್ರಮುಖ ತಾರೆಯರು ಪ್ರದರ್ಶನ ನೀಡಲಿದ್ದಾರೆ.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.