ADVERTISEMENT

ಇತಿಹಾಸ ಸೃಷ್ಟಿಸಿದ ಸುಶೀಲ್ ಕುಮಾರ್, ಸಂಜೆ ಅಂತಿಮ ಸಮರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 11:20 IST
Last Updated 12 ಆಗಸ್ಟ್ 2012, 11:20 IST

ಲಂಡನ್ (ಪಿಟಿಐ): ಭಾರತದ ತಾರಾ ಕುಸ್ತಿ ಪಟು ಸುಶೀಲ್ ಕುಮಾರ್ ಅವರು ಲಂಡನ್ ಒಲಿಂಪಿಕ್ಸ್ ನಲ್ಲಿ  66 ಕಿ.ಗ್ರಾಂ. ಫೈನಲ್ಸ್ ಪ್ರವೇಶಿಸುವುದರೊಂದಿಗೆ ಕನಿಷ್ಠ ಬೆಳ್ಳಿ ಪದಕದ ಭರವಸೆ ಮೂಡಿಸಿದ್ದು, ಭಾರತದ ಅತ್ಯುತ್ತಮ ವೈಯಕ್ತಿಕ ಒಲಿಂಪಿಕ್ಸ್ ಕ್ರೀಡಾಪಟು ಎಂಬುದಾಗಿ ತಮ್ಮ ಹೆಸರು ಬರೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚಿನ ಪದಕ ತಂದು ಕೊಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಸುಶೀಲ್ ಕುಮಾರ್ ಭಾನುವಾರ ಭಾರತೀಯ ಕಾಲಮಾನ 6.30 ಗಂಟೆಗೆ ಜಪಾನೀ ಸೈನಿಕ ತತ್ಸುಹಿರೊ ಯೊನೆಮಿತ್ಸು ಅವರ ಜೊತೆಗೆ ಫೈನಲ್ ನಲ್ಲಿ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.