ADVERTISEMENT
‘ಈ ಸಲ ಕಪ್‌ ನಮ್ದೆ’: ಎಬಿ ಡಿವಿಲಿಯರ್ಸ್‌ ಕುಟುಂಬದ ಹರ್ಷೋದ್ಘಾರ – ವಿಡಿಯೊ ವೈರಲ್‌
ಏಜೆನ್ಸೀಸ್
Published 28 ಏಪ್ರಿಲ್ 2018, 10:34 IST
Last Updated 28 ಏಪ್ರಿಲ್ 2018, 10:34 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಫೋಟಕ ಬ್ಯಾಟ್ಸ್‌ಮನ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಅವರು ಪತ್ನಿ ಹಾಗೂ ಮಗನೊಂದಿಗೆ ನಗರದ ಹಲವಡೆ ಸುತ್ತಾಡಿ ಸಂಭ್ರಮಿಸಿದ್ದಾರೆ.
‘ಈ ಸಲ ಕಪ್‌ ನಮ್ದೆ’ ಎಂದು ಹೇಳುವ ಮೂಲಕ ಮಾರ್ಗಮಧ್ಯೆ ಅಭಿಮಾನಿಗಳನ್ನು ರಂಜಿಸಿದ್ದಾರೆ.  ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್‌ ಆಗಿದೆ.
‘ಈ ಸಲ ಕಪ್‌ ನಮ್ದೆ’ ಎಂಬುದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಘೋಷ ವಾಕ್ಯವಾಗಿದೆ.
ಜೂನಿಯರ್ ಎಬಿಡಿ ರಂಗು
ತನ್ನ ಪುಟ್ಟ ಬ್ಯಾಟ್‌ನಲ್ಲಿ ಅಪ್ಪ ಹಾಕಿದೆ ಎಸೆತಗಳನ್ನು ಆಡಿದ ಜೂನಿಯರ್, ಹೆಚ್ಚು ಹೊತ್ತು ಫುಟ್‌ಬಾಲ್ ಆಟದಲ್ಲಿ ಸಮಯ ಕಳೆದರು. ತಂಡದ ಇನ್ನಿತರ ಆಟಗಾರರೊಂದಿಗೆ ಮಾತನಾಡುತ್ತ, ತುಂಟಾಟ ಆಡಿದ ಜೂನಿಯರ್ ಗಮನ ಸೆಳೆದರು.
ಇದನ್ನೂ ಓದಿ...
‘ಈ ಸಲ ಕಪ್‌ ನಮ್ದೆ ಗುರು’: ಕೆ.ಎಲ್‌.ರಾಹುಲ್‌
ADVERTISEMENT
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.