ADVERTISEMENT

ಈ ಸಾಧನೆ ಖುಷಿ ನೀಡಿದೆ: ವಿನಯ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2012, 21:41 IST
Last Updated 26 ನವೆಂಬರ್ 2012, 21:41 IST

ಬೆಂಗಳೂರು:  `ಈ ಸಲದ ರಣಜಿ ಋತುವಿನ ಆರಂಭದ ಪಂದ್ಯಗಳಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಒಡಿಶಾ ವಿರುದ್ಧ ಹತ್ತು ವಿಕೆಟ್‌ಗಳನ್ನು ಪಡೆದಿದ್ದರಿಂದ ಖುಷಿಯಾಗಿದೆ' ಎಂದು ಕರ್ನಾಟಕ ತಂಡದ ನಾಯಕ ವೇಗಿ ಆರ್. ವಿನಯ್‌ಕುಮಾರ ಸಂತಸ ವ್ಯಕ್ತಪಡಿಸಿದರು.
ಸೋಮವಾರದ ಆಟ ಮುಕ್ತಾಯವಾದ ನಂತರ ಅವರು ಮಾತನಾಡಿದರು.

`ಇಲ್ಲಿನ ಪಿಚ್ ವೇಗದ ಬೌಲರ್‌ಗಳಿಗೆ ನೆರವು ನೀಡಿತು. ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಸಹ ವಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೂ, ಫಲ ದಕ್ಕಲಿಲ್ಲ. ವೇಗಿಗಳಾದ ಎಚ್.ಎಸ್. ಶರತ್ ಮತ್ತು    ಸ್ಟುವರ್ಟ್ ಬಿನ್ನಿ ಕೂಡಾ ಉತ್ತಮ ಬೌಲಿಂಗ್ ಮಾಡಿದರು' ಎಂದು ಅವರು ನುಡಿದರು. ವಿನಯ್ ಒಡಿಶಾ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಮೂರು ಎರಡನೇ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.