
ಪ್ರಜಾವಾಣಿ ವಾರ್ತೆಪುಣೆ (ಪಿಟಿಐ): ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ಮೂರನೇ ಹಾಕಿ ಇಂಡಿಯಾ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ 4-2 ಗೋಲುಗಳಿಂದ ಸರ್ವಿಸಸ್ ತಂಡವನ್ನು ಮಣಿಸಿ ಎಂಟರ ಘಟ್ಟ ಪ್ರವೇಶಿಸಿದೆ.
ಕರ್ನಾಟಕದ ಪರ ಎಸ್.ಕೆ.ಉತ್ತಪ್ಪ (17ನೇ ನಿಮಿಷದಲ್ಲಿ), ಮೋಹನ್ ಮುತ್ತಣ್ಣ (23ನೇ ನಿ), ಎಂ.ಜಿ.ಪೂಣಚ್ಚ (39ನೇ ನಿ.) ಹಾಗೂ ಎಂ.ಬಿ. ಅಯ್ಯಪ್ಪ (58ನೇ ನಿ.) ಗೋಲು ತಂದಿತ್ತರು. ಸರ್ವಿಸಸ್ ಪರ ಜಾನಿ ಜಸ್ರೊಟಿಯಾ(48ನೇ ನಿ) ಹಾಗೂ ಇಗ್ನೇಸ್ ಟರ್ಕಿ (59ನೇ ನಿ.) ಒಂದೊಂದು ಗೋಲು ಹೊಡೆದರು.
ಶನಿವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡವು ಮಣಿಪುರ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.