ADVERTISEMENT

ಎಚ್‌ಎಎಲ್‌ಗೆ ರೋಚಕ ಗೆಲುವು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 19:30 IST
Last Updated 6 ಫೆಬ್ರುವರಿ 2011, 19:30 IST

ಬೆಂಗಳೂರು: ತವರು ನೆಲದ ಪ್ರೇಕ್ಷಕರ ಬೆಂಬಲದೊಂದಿಗೆ ಆಡಿದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸ್ಪೋರ್ಟ್ಸ್ ಕ್ಲಬ್ ತಂಡದವರು ಐ-ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಎರಡನೇ ಡಿವಿಷನ್ ಲೀಗ್ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್ 1-0 ಗೋಲಿನಿಂದ ಮುಂಬೈಯ ಒಎನ್‌ಜಿಸಿ ಸ್ಟೋರ್ಟ್ಸ್ ಕ್ಲಬ್ ತಂಡದ ವಿರುದ್ಧ ಪ್ರಭಾವಿ ಆಟವಾಡಿ ಗೆಲುವನ್ನು ಪಡೆಯಿತು.
 
ಎಚ್.ಎ.ಎಲ್. ಲೀಗ್‌ನಲ್ಲಿ ಇಲ್ಲಿಯವರೆಗೆ ಆಡಿದ ಒಟ್ಟು ಎಂಟು ಪಂದ್ಯಗಳಲ್ಲಿ ಮೂರನೇ ಗೆಲುವು ಇದಾಗಿದೆ. ಮೊದಲ ಎರಡು ಪಂದ್ಯಗಳನ್ನು ಜೆಸಿಟಿ ಹಾಗೂ ಪ್ರಬಲ ಮೋಹನ್ ಬಾಗನ್ ತಂಡವನ್ನು ಎಚ್‌ಎಎಲ್ ಮಣಿಸಿತ್ತು. ನಂತರ ಮೂರು ಪಂದ್ಯಗಳಲ್ಲಿ ಸೋಲು ಹಾಗೂ ಒಂದು ಪಂದ್ಯ ಡ್ರಾ ಆಯಿತು. ರಂಭದಿಂದಲೂ ಚುರುಕಾಗಿ ಆಡಿದ ಉಭಯ ತಂಡಗಳ ಆಟಗಾರರು ಪಂದ್ಯದ ಮೊದಲಾರ್ಧದಲ್ಲಿ ಗೋಲು ಗಳಿಸಲು ಯಶಸ್ವಿಯಾಗಲಿಲ್ಲ.

ವಿರಾಮದ ನಂತರ ಮಲೇನ್‌ಗಂಬ ಮೀಟಿ 70ನೇ ನಿಮಿಷದಲ್ಲಿ ಅಮೋಘ ಗೋಲುಗಳಿಸಿ ತಮ್ಮ ತಂಡದ ಗೆಲುವಿನ ರೂವಾರಿ ಆದರು. ಎಚ್‌ಎಎಲ್ ತಂಡದ ಆಟಗಾರರು ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದರು. ಒಎನ್‌ಜಿಸಿ ತಂಡದ ಆಟಗಾರರು ಗೋಲುಗಳಿಸಲು ಯತ್ನಿಸುತ್ತಿದ್ದ ಪ್ರಯತ್ನವನ್ನು ಎಚ್‌ಎಎಲ್ ತಂಡದ ಗೋಲ್ ಕೀಪರ್ ಪಿ. ಪ್ರಮೋದ್ ಹಾಗೂ ವಿಡ್ ಫೀಲ್ಡ್‌ನಲ್ಲಿದ್ದ ಆಟಗಾರರು ಸತತ ವಿಫಲಗೊಳಿಸುತ್ತಲೇ ಬಂದರು. ಒಂದು ಹಂತದಲ್ಲಿ ಒಎನ್‌ಜಿಸಿ ಒತ್ತಡಕ್ಕೆ ಒಳಗಾಯಿತು. ಕೊನೆಯಲ್ಲಿ ಗೋಲು ಗಳಿಸಿ ಪಂದ್ಯ ಡ್ರಾ ಮಾಡಿಕೊಳ್ಳಬೇಕು ಎನ್ನುವ ಆಟಗಾ ರರ ಪ್ರಯತ್ನವನ್ನು ಎಚ್‌ಎ ಎಲ್ ಗೋಲ್ ಕೀಪರ್ ವಿಫಲಗೊಳಿಸುತ್ತಲೇ ಬಂದರು.

‘ಕೊನೆಯ 15 ನಿಮಿಷಗಳ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಆಟಗಾರರು ಸಾಕಷ್ಟು ಒತ್ತಡಕ್ಕೆ ಒಳ ಗಾದರು. ಆದರೂ ಗೆಲುವು ಪಡೆಯ ವಲ್ಲಿ ಯಶಸ್ವಿಯಾದರು’ ಎಂದು ಎಚ್‌ಎಎಲ್ ತಂಡದ ಕೋಚ್ ಆರ್. ತ್ಯಾಗರಾಜನ್ ಪ್ರತಿಕ್ರಿಯಿಸಿದರು. ‘ತಂಡದ ಆಟಗಾರರು ಸಾಕಷ್ಟು ತಪ್ಪುಗಳನ್ನು ಮಾಡಿದರು. ಗೋಲು ಗಳಿಸುವ ಅನೇಕ ಅವಕಾಶಗಳನ್ನು ತಪ್ಪಿಸಿಕೊಂಡರು’ ಎಂದು  ಒಎನ್‌ಜಿಸಿ ತಂಡದ ಕೋಚ್ ಹೇಳಿದರು. ಎಚ್‌ಎಎಲ್ ಹಾಗೂ ಜೆಸಿಟಿ ನಡು ವಣ ಮುಂದಿನ ಪಂದ್ಯವು ಫೆಬ್ರವರಿ  12ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.