ADVERTISEMENT

ಎಫ್–1: ಹ್ಯಾಮಿಲ್ಟನ್‌ಗೆ ‘ಪೋಲ್‌ ಪೊಸಿಷನ್‌’

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಮೆಲ್ಬರ್ನ್‌ (ಎಎಫ್‌ಪಿ/ ಪಿಟಿಐ): ಮರ್ಸಿಡಿಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಮೊದಲನೆಯವರಾಗಿ (ಪೋಲ್‌ ಪೊಸಿಷನ್‌) ಸ್ಪರ್ಧೆ ಆರಂಭಿಸಲಿದ್ದಾರೆ.

ಶನಿವಾರ ನಡೆದ ಅರ್ಹತಾ ರೇಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬ್ರಿಟನ್‌ನ ಚಾಲಕ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ರೆಡ್‌ಬುಲ್‌ ತಂಡದ ಡೇನಿಯಲ್ ರಿಕಾರ್ಡೊ ಮತ್ತು ಮರ್ಸಿಡಿಸ್‌ ತಂಡದ ನಿಕೊ ರೋಸ್‌ಬರ್ಗ್‌ ಕ್ರಮವಾಗಿ ಎರಡು ಮತ್ತು ಮೂರನೆಯವರಾಗಿ ಸ್ಪರ್ಧೆ ಆರಂಭಿಸುವರು.

ಫೋರ್ಸ್‌ ಇಂಡಿಯಾ ತಂಡದ ನಿಕೊ ಹುಲ್ಕೆನ್‌ಬರ್ಗ್‌ ಅರ್ಹತಾ ಹಂತದಲ್ಲಿ ಗಮನಾರ್ಹ ಪ್ರದರ್ಶನ ತೋರಿ ಏಳನೇ ಸ್ಥಾನ ಪಡೆದರು. ಈ ತಂಡದ ಇನ್ನೊಬ್ಬ ಚಾಲಕ ಸೆರ್ಜಿಯೊ ಪೆರೆಜ್‌ 16ನೆಯವರಾಗಿ ಸ್ಪರ್ಧೆ ಆರಂಭಿಸಲಿದ್ದಾರೆ. ಹಾಲಿ ಚಾಂಪಿಯನ್‌ ಸೆಬಾಸ್ಟಿಯನ್‌ ವೆಟೆಲ್‌ ಋತುವಿನ ಮೊದಲ ರೇಸ್‌ನಲ್ಲಿ 12ನೆಯವರಾಗಿ ಸ್ಪರ್ಧೆ ಆರಂಭಿಸುವರು. ರೆಡ್‌ಬುಲ್‌ ತಂಡದ ಈ ಚಾಲಕ ಅರ್ಹತಾ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.