ADVERTISEMENT

ಎಲ್ಗರ್‌, ಮಾರ್ಕೆಮ್‌ ಶತಕದ ಅಬ್ಬರ

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ

ಏಜೆನ್ಸೀಸ್
Published 6 ಅಕ್ಟೋಬರ್ 2017, 19:34 IST
Last Updated 6 ಅಕ್ಟೋಬರ್ 2017, 19:34 IST
ಶತಕ ದಾಖಲಿಸಿದ ಬಳಿಕ ಸಂಭ್ರಮಿಸಿದ ಡೀನ್ ಎಲ್ಗರ್‌
ಶತಕ ದಾಖಲಿಸಿದ ಬಳಿಕ ಸಂಭ್ರಮಿಸಿದ ಡೀನ್ ಎಲ್ಗರ್‌   

ಬ್ಲೊಯೆಮ್‌ಫಂಟೆನ್‌, ದಕ್ಷಿಣ ಆಫ್ರಿಕಾ: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೀನ್ ಎಲ್ಗರ್ (113), ಎಡೆನ್ ಮಾರ್ಕೆಮ್‌ ಅವರ ಶತಕದ ಅಬ್ಬರದಿಂದಾಗಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸುವ ಕಡೆ ಹೆಜ್ಜೆ ಇರಿಸಿದೆ.

ಟಾಸ್ ಗೆದ್ದುಕೊಂಡ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈ ಅವಕಾಶ ಪಡೆದ ಫಾಫ್‌ ಡು ಪ್ಲೆಸಿಸ್ ಬಳಗ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 428 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರು

ADVERTISEMENT

ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 428 (ಡೀಮ್ ಎಲ್ಗರ್‌ 113, ಎಡೆನ್ ಮಾರ್ಕೆಮ್‌ 143, ಹಾಶಿಮ್ ಆಮ್ಲಾ ಬ್ಯಾಟಿಂಗ್‌ 89, ಫಾಫ್ ಡು ಪ್ಲೆಸಿಸ್ 62).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.