ಮೀರ್‌ಪುರ, ಬಾಂಗ್ಲಾದೇಶ (ಪಿಟಿಐ): ಗೆಲುವಿನ ಹೊಸ್ತಿಲಲ್ಲಿದ್ದಾಗಲೇ ಬಾಂಗ್ಲಾದೇಶಕ್ಕೆ ಸೋಲಿನ ಆಘಾತ. ಉಮರ್ ಗುಲ್ (58ಕ್ಕೆ3) ಅವರ ಪ್ರಭಾವಿ ಬೌಲಿಂಗ್ ಇದಕ್ಕೆ ಕಾರಣ. ಇದರಿಂದ ಪಾಕಿಸ್ತಾನ ತಂಡಕ್ಕೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ 21 ರನ್‌ಗಳ ವಿಜಯದ ಸಂಭ್ರಮ.
ಆತಿಥೇಯ ತಂಡ ಗೆಲುವು ಪಡೆಯಲು ಕೊನೆಯಲ್ಲಿ 12 ಎಸೆತಗಳಲ್ಲಿ 22 ರನ್ ಗಳಿಸಬೇಕಿತ್ತು. ಈ ವೇಳೆ ಉಮರ್ 49 ಓವರ್‌ನ ಮೊದಲ ಎಸೆತದಲ್ಲಿ ಶಕೀಬ್ ಅಲ್ ಹಸನ್ ಅವರನ್ನು ಬೋಲ್ಡ್ ಮಾಡಿದರು. ಇದು ಪ್ರವಾಸಿ ಪಡೆಯ ಸಂಭ್ರಮಕ್ಕೆ ಕಾರಣವಾಯಿತು.
ಪಾಕ್ ನೀಡಿದ್ದ 263 ರನ್‌ಗಳ ಗುರಿ ಬೆನ್ನು ಹತ್ತಿದ ಬಾಂಗ್ಲಾ ಆರಂಭದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಇದಕ್ಕೆ ತಮೀಮ್ ಇಕ್ಬಾಲ್ (64, 89ಎಸೆತ, 6ಬೌಂಡರಿ, 1ಸಿಕ್ಸರ್) ಹಾಗೂ ಶಕೀಬ್ (64, 66ಎಸೆತ, 4ಬೌಂ) ಕಾರಣರಾದರು.
ಶಕೀಬ್ ತಂಡವನ್ನು ಗೆಲುವಿನ ಹಾದಿಯಲ್ಲಿ ಸಾಗಿಸಲು ಸಾಕಷ್ಟು ಹೋರಾಟ ನಡೆಸಿದ್ದರು. ಆದರೆ, ಜೊತೆಗಿದ್ದ ಬ್ಯಾಟ್ಸ್ ಮನ್ನರು ಕ್ರೀಸ್‌ನ ಕಚ್ಚಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಮುಷ್ಫೀಕುರ್ ರಹೀಮ್ (3), ಅಬ್ದುರ್ ರಜಾಕ್ (1), ಮರ್ಷಫೆ ಮೊರ್ತಜಾ (1) ಹಾಗೂ ಶಫಿ ಉಲ್ ಇಸ್ಲಾಮ್ (1) `ಪೆವಿಲಿಯನ್ ಪರೇಡ್~ ನಡೆಸಿದ್ದೆ ಇದಕ್ಕೆ ಸಾಕ್ಷಿ. ಇದರಿಂದ ಆತಿಥೇಯರು 48.1 ಓವರ್‌ಗಳಲ್ಲಿ 241 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡರು.
ಸಂಕಷ್ಟದಲ್ಲೂ ಉತ್ತಮ ಮೊತ್ತ: ಪಾಕ್ ತಂಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂಕಷ್ಟದ ನಡುವೆಯೂ 50 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 262 ರನ್ ಗಳಿಸಿತ್ತು.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ಲಭಿಸಿತ್ತು. ಮೊಹಮ್ಮದ್ ಹಫೀಜ್ (89, 126ಎಸೆತ, 7ಬೌಂಡರಿ), ನಾಸೀರ್ ಜಮ್‌ಶೇದ್ (54, 64 ಎಸೆತ, 5ಬೌಂ, 1ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಮಾಡಿದರು.
ಈ ಜೋಡಿ ಮೊದಲ ವಿಕೆಟ್‌ಗೆ 135 ರನ್ ಕಲೆ ಹಾಕಿ ಬುನಾದಿಯನ್ನು ಗಟ್ಟಿ ಮಾಡಿತು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ರನ್ ಸೌಧ ನಿರ್ಮಿಸುವಲ್ಲಿ ಕೊಂಚ ಎಡವಿದರು.
ಮಧ್ಯಮ ಕ್ರಮಾಂಕದ ಅಸದ್ ಶಫೀಕ್ (4) ಹಾಗೂ ಮಿಸ್ಬಾ ಉಲ್ ಹಕ್ (8), ಶಾಹೀದ್ ಅಫ್ರಿದಿ (0) ಕೈ ಕೊಟ್ಟರು. ಈ ಬ್ಯಾಟ್ಸ್‌ಮನ್‌ಗಳನ್ನು ಎರಡಂಕಿಯ ಮೊತ್ತ ಮುಟ್ಟಲು ಆತಿಥೇಯ ತಂಡ ಅವಕಾಶ ನೀಡಲಿಲ್ಲ. ಶಹಾದತ್ ಹುಸೇನ್ (53ಕ್ಕೆ3) ಹಾಗೂ ಶಕೀಬ್ ಅಲ್ ಹಸನ್ (41ಕ್ಕೆ2) ಬೃಹತ್ ರನ್ ಕಲೆ ಹಾಕುವ ಪ್ರವಾಸಿ ಪಾಳೆಯದ ಆಸೆಗೆ ಅಡ್ಡಿಯಾದರು.
38 ರನ್ ಕಲೆ ಹಾಕುವ ಅಂತರದಲ್ಲಿ ಪಾಕ್ ತಂಡ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದು ಪಾಕ್ ತಂಡದ ರನ್ ವೇಗದ ಕುಸಿತಕ್ಕೂ ಕಾರಣವಾಯಿತು. ಆದರೆ, ಕೊನೆಯಲ್ಲಿ ಉಮರ್ (39, 25ಎಸೆತ, 5ಬೌಂಡರಿ, 1ಸಿಕ್ಸರ್) ಅಬ್ಬರಿಸಿ ತಂಡವನ್ನು 250ರ ಗಡಿ ದಾಟಿಸಿದರು. ಎಂಟನೇ ವಿಕೆಟ್‌ಗೆ ಸರ್ಫರಾಜ್ ಅಹ್ಮದ್ (ಔಟಾಗದೇ 19) ಹಾಗೂ ಗುಲ್ ನಡುವೆ 53 ರನ್‌ಗಳ ಜೊತೆಯಾಟ ಬಂದಿದ್ದು ಕೂಡ ಇದಕ್ಕೆ ನೆರವಾಯಿತು.
ಸ್ಕೋರ್ ವಿವರ:
ಪಾಕಿಸ್ತಾನ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 262
ಮೊಹಮ್ಮದ್ ಹಫೀಜ್ ಸಿ ಶಫಿ ಉಲ್ ಇಸ್ಲಾಮ್ ಬಿ ಶಹಾದತ್ ಹುಸೇನ್ 89
ನಾಸೀರ್ ಜಮ್‌ಶೇದ್ ರನ್‌ಔಟ್ (ಶಕೀಬ್ /ಮುಷ್ಫೀಕುರ್ ರಹೀಮ್) 54
ಯೂನಿಸ್ ಖಾನ್ ಸಿ ಅಬ್ದುರ್ ರಜಾಕ್ ಬಿ ಶಹಾದತ್ ಹುಸೇನ್ 12
ಉಮರ್ ಅಕ್ಮಲ್ ಸಿ ಅಬ್ದುರ್ ರಜಾಕ್ ಬಿ ಶಕೀಬ್ ಅಲ್ ಹಸನ್ 21
ಅಸದ್ ಶಫೀಕ್ ಸಿ ಮರ್ಷಫೆ ಮೊರ್ತಜಾ ಬಿ ಶಹಾದತ್ ಹುಸೇನ್ 04
ಮಿಸ್ಬಾ ಉಲ್ ಹಕ್ ಬಿ ಅಬ್ದುರ್ ರಜಾಕ್ 08
ಶಾಹೀದ್ ಅಫ್ರಿದಿ ಸಿ ಮತ್ತು ಬಿ ಶಕೀಬ್ ಅಲ್ ಹಸನ್ 00
ಸರ್ಫರಾಜ್ ಅಹ್ಮದ್ ಔಟಾಗದೇ 19
ಉಮರ್ ಗುಲ್ ಬಿ ಮರ್ಷಫೆ ಮೊರ್ತಜಾ 39
ಸಯೀದ್ ಅಜ್ಮಲ್ ಔಟಾಗದೇ 08
ಇತರೆ: ಲೆಗ್ ಬೈ-2, ವೈಡ್-5, ನೋ ಬಾಲ್-1 08
ವಿಕೆಟ್ ಪತನ: 1-135 (ನಾಸೀರ್; 27.5), 2-160 (ಯೂನಿಸ್; 32.5), 3-169 (ಹಫೀಜ್; 34.4), 4-175 (ಶಫೀಕ್; 36.3), 5-192 (ಉಮರ್ ಅಕ್ಮಲ್; 39.3), 6-193 (ಅಫ್ರಿದಿ; 39.6), 7-198 (ಮಿಸ್ಬಾ; 41.2), 8-251 (ಉಮರ್ ಗುಲ್; 48.6).
ಬೌಲಿಂಗ್ ವಿವರ: ಮರ್ಷಫೆ ಮೊರ್ತಜಾ 10-0-55-1, ಶಫಿ ಉಲ್ ಇಸ್ಲಾಮ್ 8-0-49-0, ಶಕೀಬ್ ಅಲ್ ಹಸನ್ 10-0-41-2, ಶಹಾದತ್ ಹುಸೇನ್ 8-0-53-3, ಅಬ್ದುರ್ ರಜಾಕ್ 10-0-43-1, ಮಹ್ಮುದುಲ್ಲಾ 4-0-19-0.
ಬಾಂಗ್ಲಾದೇಶ 48.1 ಓವರ್‌ಗಳಲ್ಲಿ 241
ತಮೀಮ್ ಇಕ್ಬಾಲ್ ಬಿ ಮೊಹಮ್ಮದ್ ಹಫೀಜ್ 64
ನಜೀಮುದ್ದೀನ್ ಸಿ ಉಮರ್ ಗುಲ್ ಬಿ ಐಜಾಜ್ ಚೀಮಾ 30
ಜಹುರುಲ್ ಇಸ್ಲಾಮ್ ಬಿ ಶಾಹೀದ್ ಅಫ್ರಿದಿ 23
ಮುಷ್ಫೀಕುರ್ ರಹೀಮ್ ಬಿ ಶಾಹೀದ್ ಅಫ್ರಿದಿ 03
ಶಕೀಬ್ ಅಲ್ ಹಸನ್ ಬಿ ಉಮರ್ ಗುಲ್ 64
ಮಹ್ಮುದುಲ್ಲಾ ಎಲ್‌ಬಿಡಬ್ಲ್ಯು ಮೊಹಮ್ಮದ್ ಹಫೀಜ್ 00
ನಾಸೀರ್ ಹುಸೇನ್ ಬಿ ಉಮರ್ ಗುಲ್ 47
ಅಬ್ದುರ್ ರಜಾಕ್ ಬಿ ಸಯೀದ್ ಅಜ್ಮಲ್ 01
ಮರ್ಷಫೆ ಮೊರ್ತಜಾ ಬಿ ಸಯೀದ್ ಅಜ್ಮಲ್ 01
ಶಫಿ ಉಲ್ ಇಸ್ಲಾಮ್ ಎಲ್‌ಬಿಡಬ್ಲ್ಯು ಉಮರ್ ಗುಲ್ 01
ಶಹಾದತ್ ಹುಸೇನ್ ಔಟಾಗದೇ 00
ಇತರೆ: ಲೆಗ್ ಬೈ-2, ವೈಡ್-5 07
ವಿಕೆಟ್ ಪತನ: 1-45 (ನಜೀಮುದ್ದೀನ್; 10.5), 2-90 (ಇಸ್ಲಾಮ್; 20.5), 3-100 (ರಹೀಮ್; 22.3), 4-135 (ಇಕ್ಬಾಲ್; 28.3), 5-135 (ತಮೀಮ್; 28.3), 6-224 (ಮಹ್ಮುದುಲ್ಲಾ; 43.3), 7-228 (ರಜಾಕ್; 44.1), 8-230 (ಮೊರ್ತಜಾ; 44.6), 9-235 (ಇಸ್ಲಾಮ್; 45.5), 10-241 (ಗುಲ್; 48.1).
ಬೌಲಿಂಗ್ ವಿವರ: ಮೊಹಮ್ಮದ್ ಹಫೀಜ್ 10-1-42-2, ಉಮರ್ ಗುಲ್ 9.1-0-58-3, ಸಯ್ಯದ್ ಅಜ್ಮಲ್ 10-0-45-2, ಐಜಾಜ್ ಚೀಮಾ 9-0-47-1, ಶಾಹೀದ್ ಅಫ್ರಿದಿ 10-0-49-2.
ಫಲಿತಾಂಶ: ಪಾಕಿಸ್ತಾನಕ್ಕೆ 21 ರನ್‌ಗಳ ಜಯ. ಪಂದ್ಯ ಶ್ರೇಷ್ಠ: ಮೊಹಮ್ಮದ್ ಹಫೀಜ್
ಮುಂದಿನ ಪಂದ್ಯ: ಭಾರತ-ಶ್ರೀಲಂಕಾ (ಮಾರ್ಚ್ 13).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.