ADVERTISEMENT

ಏಷ್ಯಾ ಕ್ರೀಡಾಕೂಟ: ವಿಕಾಸ್‌ಗೌಡಗೆ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 19:30 IST
Last Updated 4 ಜುಲೈ 2017, 19:30 IST
ಏಷ್ಯಾ ಕ್ರೀಡಾಕೂಟ: ವಿಕಾಸ್‌ಗೌಡಗೆ ಹಸಿರು ನಿಶಾನೆ
ಏಷ್ಯಾ ಕ್ರೀಡಾಕೂಟ: ವಿಕಾಸ್‌ಗೌಡಗೆ ಹಸಿರು ನಿಶಾನೆ   

ಭುವನೇಶ್ವರ : ಏಷ್ಯಾ ಕ್ರೀಡಾಕೂಟದ ಡಿಸ್ಕಸ್ ಥ್ರೋ ಸ್ಪರ್ಧೆ ಯಲ್ಲಿ ಕರ್ನಾಟಕದ ವಿಕಾಸ್ ಗೌಡ ಸ್ಪರ್ಧಿಸುವುದು ಖಚಿತವಾಗಿದೆ.

ಹಾಲಿ ಚಾಂಪಿಯನ್‌ ವಿಕಾಸ್‌ಗೌಡ ಅವರಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಕುರಿತ ಗೊಂದಲಗಳಿಗೆ ರಾಷ್ಟ್ರೀಯ ಅಥ್ಲೆಟಿಕ್ ಫೆಡ
ರೇಷನ್‌ ಮಂಗಳವಾರ ತೆರೆ ಎಳೆದಿದೆ. ಹರ್ಡಲ್ಸ್‌ ಸ್ಪರ್ಧಿ ಸಿದ್ಧಾಂತ ತಿಂಗಳಾಯ ಅವರ ಸ್ಪರ್ಧೆಗೂ ಫೆಡರೇಷನ್‌ ಹಸಿರು ನಿಶಾನೆ ತೋರಿಸಿದೆ.

ಬುಧವಾರ 34ನೇ ವರ್ಷಕ್ಕೆ ಕಾಲಿಡಲಿರುವ ವಿಕಾಸ್‌್ ಗೌಡ ಏಷ್ಯಾ ಕ್ರೀಡಾಕೂಟದಲ್ಲಿ ಹ್ಯಾಟ್ರಿಕ್‌ ಚಿನ್ನದ ಕನಸು ಹೊತ್ತಿದ್ದಾರೆ.
ಆದರೆ ಆಯ್ಕೆ ಟ್ರಯಲ್ಸ್ ಸಂದರ್ಭದಲ್ಲಿ ಕೇವಲ 57.79 ಮೀಟರ್‌ ದೂರ ಡಿಸ್ಕಸ್ ಎಸೆದಿದ್ದ ಅವರನ್ನು ಸ್ಪರ್ಧೆಗೆ ಕಳುಹಿಸಲು ಫೆಡರೇಷನ್ ಹಿಂದೇಟು ಹಾಕಿತ್ತು. 2013ರ ಏಷ್ಯಾ ಕ್ರೀಡಾಕೂಟದಲ್ಲಿ 64.90 ಮೀಟರ್‌ ದೂರ ಎಸೆದು ಚಿನ್ನ ಗೆದ್ದಿದ್ದ ಅವರು ಕಳೆದ ಬಾರಿ 62.03 ಮೀಟರ್ ದೂರ ಎಸೆದು ಎರಡನೇ ಚಿನ್ನಕ್ಕೆ ಕೊರಳೊಡ್ಡಿದ್ದರು.

ADVERTISEMENT

2005 ಮತ್ತು 2011ರ ಏಷ್ಯಾ ಡಿಸ್ಕಸ್ ಥ್ರೋ ಚಾಂಪಿ ಯನ್‌ಷಿಪ್‌ ನಲ್ಲೂ ಅವರು ಬೆಳ್ಳಿ ಗೆದ್ದಿದ್ದರು.  ಲಾಂಗ್ ಜಂಪ್‌ ಸ್ಪರ್ಧಿ ಗಳಾದ ಸಿದ್ಧಾರ್ಥ ಮೋಹನ್ ನಾಯಕ್‌ ಮತ್ತು ನಯನಾ ಜೇಮ್ಸ್‌, ಟ್ರಿಪಲ್ ಜಂಪ್ ಸ್ಪರ್ಧಿ ಕಾರ್ತಿಕ್‌ ಉಣ್ಣಿಕೃಷ್ಣನ್‌ ಮತ್ತು ಜಾಯ್ಲಿನ್ ಲೋಬೊ ಅವರಿಗೆ ಶನಿವಾರವೇ ಹಸಿರು ನಿಶಾನೆ ಲಭಿಸಿತ್ತು.

ಕಳಿಂಗಾ ಕ್ರೀಡಾಂಗಣದಲ್ಲಿ ನಡೆಯ ಲಿರುವ ಕ್ರೀಡಾಕೂಟದಲ್ಲಿ ಆತಿಥೇಯ ಭಾರತ 46 ಮಹಿಳೆಯರು ಸೇರಿದಂತೆ ಒಟ್ಟು 95 ಸ್ಪರ್ಧಿಗಳನ್ನು ಕಣಕ್ಕೆ ಇಳಿಸಲಿದೆ.

ಭಾರತಕ್ಕೆ ಭವ್ಯ ಭವಿಷ್ಯವಿದೆ
ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಭಾರತಕ್ಕೆ ಭವ್ಯ ಭವಿಷ್ಯವಿದೆ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷ ಸೆಬಾಸ್ಟಿಯನ್‌ ಕೋ ಅಭಿಪ್ರಾಯಪಟ್ಟರು. ‘ಭಾರತದಲ್ಲಿ ಕ್ರೀಡೆಯ ಬೆಳವಣಿಗೆಗೆ ಸಾಕಷ್ಟು ಸೌಕರ್ಯವಿದೆ. ಇಲ್ಲಿನವರ ಕ್ರೀಡಾ ಪ್ರೀತಿ ಅಪಾರ. ಇದನ್ನೆಲ್ಲ ಪೂರಕವಾಗಿ ಬಳಸಿಕೊಂಡರೆ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ’ ಎಂದು ಏಷ್ಯಾ ಅಥ್ಲೆಟಿಕ್ಸ್ ಸಂಸ್ಥೆಯ ಸಮಿತಿ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು ಹೇಳಿದರು.

‘ವಿಶ್ವದ ಶೇಕಡಾ 60 ಯುವ ಜನರು ಏಷ್ಯಾದಲ್ಲಿದ್ದಾರೆ. ಅವರಿಗೆ ಸರಿಯಾದ ವಿಧಾನದಲ್ಲಿ ಕ್ರೀಡೆಯ ಬಗ್ಗೆ ತಿಳಿಸಿಕೊಡಬೇಕಾದ ಅಗತ್ಯವಿದೆ. ಚೀನಾ ಮತ್ತು ಜಪಾನ್ ಈ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆ ಇರಿಸಿ ಯಶಸ್ಸು ಕಂಡಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.