ADVERTISEMENT

ಐಪಿಎಲ್: ಆರ್‌ಸಿಬಿ ತಂಡದಲ್ಲಿ 25 ಆಟಗಾರರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್‌ನ ನಾಲ್ಕನೇ ಅವತರಣಿಕೆಯ ಟೂರ್ನಿಗೆ ಎಲ್ಲ ಹತ್ತು ಫ್ರಾಂಚೈಸಿಗಳು ಅಂತಿಮ ತಂಡವನ್ನು ಪ್ರಕಟಿಸಿವೆ. ಪ್ರತಿ ಫ್ರಾಂಚೈಸಿಗೆ ಗರಿಷ್ಠ 30 ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಇದೇ ಮೊದಲ ಬಾರಿಗೆ ಲೀಗ್‌ನಲ್ಲಿ ಆಡುತ್ತಿರುವ ಸಹಾರಾ ಪುಣೆ ವಾರಿಯರ್ಸ್ ಮಾತ್ರ 30 ಆಟಗಾರರ ಜೊತೆ ಒಪ್ಪಂದ ಮಾಡಿದೆ.

ಅತಿಕಡಿಮೆ ಆಟಗಾರರನ್ನು ಹೊಂದಿರುವ ತಂಡ ಕೋಲ್ಕತ್ತ ನೈಟ್ ರೈಡರ್ಸ್. ಶಾರೂಖ್ ಖಾನ್ ಒಡೆತನದ ತಂಡದಲ್ಲಿ 20 ಆಟಗಾರರು ಇದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 25 ಆಟಗಾರರನ್ನು ಹೊಂದಿದೆ. ದೆಹಲಿ ಡೇರ್‌ಡೆವಿಲ್ಸ್ 29 ಆಟಗಾರರ ಜೊತೆ ಒಪ್ಪಂದ ಮಾಡಿದೆ. ಕೊಚ್ಚಿ ಟಸ್ಕರ್ಸ್ ಕೇರಳ, ಡೆಕ್ಕನ್ ಚಾರ್ಜರ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡ ತಲಾ 27 ಆಟಗಾರರನ್ನು ಸೇರಿಸಿಕೊಂಡಿದೆ.

25 ಸದಸ್ಯರ ಆರ್‌ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ, ಜಹೀರ್ ಖಾನ್, ಸೌರಭ್ ತಿವಾರಿ, ಚೇತೇಶ್ವರ ಪೂಜಾರ, ಅಭಿಮನ್ಯು ಮಿಥುನ್, ಮೊಹಮ್ಮದ್ ಕೈಫ್, ಅರುಣ್ ಕಾರ್ತಿಕ್, ಸಿ.ಎಂ. ಗೌತಮ್, ಅಬ್ರಾರ್ ಖಾಜಿ, ಮಯಾಂಕ್ ಅಗರ್‌ವಾಲ್, ಭರತ್ ನಾರಾಯಣ್, ರಾಜು ಭಟ್ಕಳ್, ಶ್ರೀನಾಥ್ ಅರವಿಂದ್, ರ್ಯಾನ್ ನಿನಾನ್, ಅಸದ್ ಖಾನ್ ಪಠಾಣ್.

ತಂಡದಲ್ಲಿರುವ ವಿದೇಶಿ ಆಟಗಾರರು: ತಿಲಕರತ್ನೆ ದಿಲ್ಶಾನ್, ಎಬಿ ಡಿವಿಲಿಯರ್ಸ್, ಡೇನಿಯಲ್ ವೆಟೋರಿ, ಡಿರ್ಕ್ ನ್ಯಾನ್ಸ್, ಚಾರ್ಲ್ ಲಾಂಗ್‌ವೆಲ್ಟ್, ಲೂಕ್ ಪೊಮರ್ಸ್‌ಬ್ಯಾಕ್, ಜಾನ್ ವಾನ್ ಡೆರ್ ವರ್ಥ್, ರಿಲೀ ರೂಸೊ, ನುವಾನ್ ಪ್ರದೀಪ್ ಮತ್ತು ಜೊನಾಥನ್ ವಾಂಡೀರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.