ADVERTISEMENT

ಒಂದು ವರ್ಷದ ನಿಷೇಧ ಸರಿಯಲ್ಲ: ವಾರ್ನ್

ಪಿಟಿಐ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ಶೇನ್ ವಾರ್ನ್
ಶೇನ್ ವಾರ್ನ್   

ಸಿಡ್ನಿ/ಚಂಡೀಗಡ: ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರನ್ನು 12 ತಿಂಗಳು ಕ್ರಿಕೆಟ್‌ನಿಂದ ನಿಷೇಧಿಸಿರುವುದು ಸರಿಯಲ್ಲ ಎಂದು ಹಿರಿಯ ಕ್ರಿಕೆಟಿಗ ಶೇನ್ ವಾರ್ನ್ ಅಭಿಪ್ರಾಯಪಟ್ಟಿದ್ದಾರೆ.

‘ಆಸ್ಟ್ರೇಲಿಯಾ ತಂಡದ ಆಟಗಾರರು ಮಾಡಿರುವುದು ದೊಡ್ಡ ತಪ್ಪು ಎಂಬುದರಲ್ಲಿ ಅನುಮಾನವೇ ಇಲ್ಲ. ಸ್ಮಿತ್ ಮತ್ತು ವಾರ್ನರ್ ಅವರನ್ನು ಕ್ರಮವಾಗಿ ನಾಯಕ ಮತ್ತು ಉಪನಾಯಕತ್ವದಿಂದ ಕೆಳಗಿಳಿಸಿ, ದೊಡ್ಡ ಮೊತ್ತದ ದಂಡ ವಿಧಿಸಬೇಕಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್‌ ಪಂದ್ಯ ಆಡದಂತೆ ಅಮಾನತುಗೊಳಿಸಬೇಕಿತ್ತು. ಒಂದು ವರ್ಷ ನಿಷೇಧ ಬೇಕಾಗಿರಲಿಲ್ಲ’ ಎಂದು ದಿ ಹೆರಾಲ್ಡ್ ಸನ್ ಪತ್ರಿಕೆಗೆ ಬರೆದಿರುವ ಆಂಕಣದಲ್ಲಿ ಉಲ್ಲೇಖಿಸಿದ್ದಾರೆ.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ: ವೆಂಕಿ
ಚೆಂಡು ವಿರೂಪಗೊಳಿಸಿರುವುದು ಗಂಭೀರ ಆರೋಪವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

ADVERTISEMENT

ಸೂಕ್ತ ಕ್ರಮ: ‘ಸ್ಮಿತ್ ಮತ್ತು ವಾರ್ನರ್‌ ಅವರಿಗೆ ನಿಷೇಧ ಶಿಕ್ಷೆ ವಿಧಿಸಿರುವುದು ಸರಿಯಾದ ಕ್ರಮ. ಕ್ರಿಕೆಟ್ ಆಸ್ಟ್ರೇಲಿಯಾ ದಿಟ್ಟ ನಿರ್ಧಾರ ತೆಗೆದುಕೊಂಡಿದೆ’ ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.