ADVERTISEMENT

ಒಟಾಗೊ ತಂಡಕ್ಕೆ ‘ಸೂಪರ್’ ಗೆಲುವು

ಚಾಂಪಿಯನ್ಸ್ ಲೀಗ್‌ ಕ್ರಿಕೆಟ್‌: ಕಾಕ್‌ ಶತಕಕ್ಕೆ ಲಭಿಸದ ಫಲ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2013, 19:59 IST
Last Updated 29 ಸೆಪ್ಟೆಂಬರ್ 2013, 19:59 IST
ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಲಯನ್ಸ್‌ ತಂಡದ ವಿಕೆಟ್‌ ಬಿದ್ದಾಗ ಒಟಾಗೊ ವೋಲ್ಟ್ಸ್‌ ತಂಡದ ಆಟಗಾರರು ಸಂಭ್ರಮಿಸಿದರು
ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಲಯನ್ಸ್‌ ತಂಡದ ವಿಕೆಟ್‌ ಬಿದ್ದಾಗ ಒಟಾಗೊ ವೋಲ್ಟ್ಸ್‌ ತಂಡದ ಆಟಗಾರರು ಸಂಭ್ರಮಿಸಿದರು   

ಜೈಪುರ (ಪಿಟಿಐ): ರೋಚಕ ಹೋರಾಟ ಪ್ರತಿ ಹೋರಾಟಕ್ಕೆ ಸಾಕ್ಷಿಯಾದ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಒಟಾಗೊ ವೋಲ್ಟ್ಸ್‌ ತಂಡ ‘ಸೂಪರ್‌ ಓವರ್‌’ನಲ್ಲಿ ಲಯನ್ಸ್‌ ಎದುರು ಗೆಲುವು ಸಾಧಿಸಿತು.

ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌ನ ಒಟೊಗೊ ಫೀಲ್ಡಿಂಗ್‌ ಆರಿಸಿಕೊಂಡಿತು. ಲಯನ್ಸ್‌ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 167 ರನ್‌ ಕಲೆ ಹಾಕಿತು. ವೋಲ್ಟ್ಸ್‌ ಕೂಡಾ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿ ಸಮಬಲ ಸಾಧಿಸಿತು. ಆದ್ದರಿಂದ ಫಲಿತಾಂಶ ನಿರ್ಧರಿಸಲು ‘ಸೂಪರ್‌ ಓವರ್‌’ ಮೊರೆ ಹೋಗಲಾಯಿತು.
ಸೂಪರ್‌ ಓವರ್‌ನಲ್ಲಿಯೂ ಉಭಯ ತಂಡಗಳು ತಲಾ 13 ರನ್ ಕಲೆ ಹಾಕಿದವು. ಆದರೆ, ಒಟಾಗೊ ವಿಕೆಟ್‌ ನಷ್ಟವಿಲ್ಲದೆ ರನ್‌ ಗಳಿಸಿದ್ದ ಕಾರಣ ಈ ತಂಡ

ಗೆಲುವಿನೊಂದಿಗೆ ನಾಲ್ಕು ಪಾಯಿಂಟ್‌ಗಳನ್ನು ಪಡೆ­ಯಿತು. ಲಯನ್ಸ್‌ 13 ರನ್‌ ಗಳಿಸಲು ಎರಡು ವಿಕೆಟ್‌ ಕಳೆದುಕೊಂಡಿತು.
ಕ್ವಿಂಟನ್‌ ಡಿ ಕಾಕ್‌ (ಔಟಾಗದೆ 109, 63ಎಸೆತ, 10 ಬೌಂಡರಿ, 5 ಸಿಕ್ಸರ್‌) ಅವರ ಅಬ್ಬರದ ಶತಕದ ಬಲದಿಂದ ಲಯನ್ಸ್‌ ತಂಡ ಸವಾಲಿನ ಮೊತ್ತ ಕಲೆ ಹಾಕಿತ್ತು. ಆದರೆ, ಪಂದ್ಯ ಸೋತ ಕಾರಣ ಶತಕದ ಹೊಳಪು ಮರೆಯಾಯಿತು.

ಸಂಕ್ಷಿಪ್ತ ಸ್ಕೋರು: ಲಯನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 167. (ಕ್ವಿಂಟನ್‌ ಡಿ ಕಾಕ್‌ ಔಟಾಗದೆ 109, ತೆಂಬಾ ಬವುಮಾ 13, ಜೇನ್‌ ಸ್ಯಾಮ್ಸ್‌ 20; ನಿಕ್‌ ಬೇಯರ್ಡ್‌ 31ಕ್ಕೆ2). ಒಟಾಗೊ ವೋಲ್ಟ್‌್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 167.  (ಹಮೀಷ್‌ ರುಧರ್‌ಫರ್ಡ್‌ 32, ಡೆರೆಕ್‌ ಡಿ ಬೂರ್ಡರ್‌ 32, ಜೇಮ್ಸ್‌ ನೇಷಮ್ ಔಟಾಗದೆ 52, ಇಯಾನ್‌ ಬಟ್ಲರ್‌ 9; ಸೊಹೈಲಿ ತನ್ವಿರ್‌ 35ಕ್ಕೆ1, ಲಾನ್ವಬೊ ಸೊಸೊಬೆ 30ಕ್ಕೆ2, ಇಮ್ರಾನ್‌ ತಾಹೀರ್‌ 28ಕ್ಕೆ2). ಫಲಿತಾಂಶ: ಸೂಪರ್‌ ಓವರ್‌ನಲ್ಲಿ ಒಟಾಗೊ ವೋಲ್ಟ್ಸ್‌ ತಂಡಕ್ಕೆ ಜಯ.
ಪಂದ್ಯ ಶ್ರೇಷ್ಠ: ಜೇಮ್ಸ್‌ ನೇಷಮ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.