
ಪ್ರಜಾವಾಣಿ ವಾರ್ತೆ
ಲಂಡನ್ (ಐಎಎನ್‌ಎಸ್): ಒಲಿಂಪಿಕ್ ಬ್ಯಾಡ್ಮಿಂಟನ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲೇ ಭಾರತದ ಜ್ವಾಲಾ ಗುಟ್ಟಾ ಹಾಗೂ ವಿ.ದಿಜು ಅವರು ಪರಾಭವಗೊಂಡಿದ್ದಾರೆ.
ಮಿಶ್ರ ಡಬಲ್ಸ್‌ನ ಸಿ ಗುಂಪಿನಲ್ಲಿ 3ನೇ ಶ್ರೇಯಾಂಕ ಪಡೆದಿದ್ದ ಈ ಜೋಡಿಯನ್ನು ಇಂಡೋನೇಷ್ಯಾದ ಟೊಂಟೊವಿ ಅಹಮ್ಮದ್ ಹಾಗೂ ಲಿಲಿಯಾನ ನಾಸಿ ಅವರು 16-21, 12-21ರ ಸೆಟ್‌ಗಳಲ್ಲಿ ಸೋಲಿಸಿದರು.
27 ನಿಮಿಷಗಳ ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ ಜ್ವಾಲಾ ಹಾಗೂ ದಿಜು ಅವರು ತೀರಾ ನಿರಾಶದಾಯಕ ಪ್ರದರ್ಶನ ನೀಡಿದರು.
ಬುಧವಾರದಿಂದ ಆರಂಭವಾಗುವ ನಾಕ್‌ಔಟ್ ಪಂದ್ಯಾವಳಿಗಳಿಗೆ ಅರ್ಹತೆ ಪಡೆಯಬೇಕಾದರೆ ಇವರು ಮುಂದಿನ 2 ಲೀಗ್ ಪಂದ್ಯಗಳಲ್ಲಿ ಜಯಿಸಲೇ ಬೇಕಾಗಿದೆ. ಮುಂದಿನ ಪಂದ್ಯ ಭಾನುವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.