ADVERTISEMENT

ಕಣ್ಣೀರು...ಸಂತಸದ ಸಾಗರ...!

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST
ಕಣ್ಣೀರು...ಸಂತಸದ ಸಾಗರ...!
ಕಣ್ಣೀರು...ಸಂತಸದ ಸಾಗರ...!   

ಮ್ಯಾಡ್ರಿಡ್ (ಎಎಫ್‌ಪಿ):  ಸಂಭ್ರಮದ ಸಾಗರವೇ ಹರಿಯಿತು ಸ್ಪೇನ್ ರಾಜಧಾನಿಯಲ್ಲಿ. ಎಲ್ಲೆಲ್ಲೂ ಅರಿಸಿಣ-ಕುಂಕುಮ ಹರಡಿದಂತೆ. ನಗಾರಿಯ ಸದ್ದು. ಅದರ ಲಯಕ್ಕೆ ಹೊಂದಿಕೊಂಡು ಫುಟ್‌ಬಾಲ್ ಪ್ರೇಮಿಗಳ ಹೆಜ್ಜೆಗಳು ನಲಿದವು.

ಎಲ್ಲ ವಯಸ್ಸಿನವರೂ ಬೀದಿಯಲ್ಲಿ. ಹಳದಿ-ಕೆಂಪು ವರ್ಣದ ಪೋಷಾಕು ತೊಟ್ಟವರ ನಡುವೆ ಪರಿಸ್ಪರ ಅಭಿನಂದನೆಯ ವಿನಿಮಯ. `ನಾವು ಚಾಂಪಿಯನ್ಸ್... ನಮಗಾರೂ ಸಾಟಿಯಿಲ್ಲ~ ಎನ್ನುವ ಘೋಷಣೆ. ಜೊತೆಗೆ ಇಟಲಿ ವಿರುದ್ಧ ಸ್ಪೇನ್ ತಂಡದ ಆಟಗಾರರು ಗಳಿಸಿದ ನಾಲ್ಕೂ ಗೋಲುಗಳ ಸ್ಮರಣೆ.

ರೋಮ್‌ನಲ್ಲಿ...:  ಯೂರೊ ಕಪ್ ಫೈನಲ್‌ನಲ್ಲಿ ಪರಾಭವಗೊಂಡ ಇಟಲಿಯ ರಾಜಧಾನಿ ರೋಮ್‌ನಲ್ಲಿ ಅಸಹನೀಯ ಮೌನ. ಕೋಲಿಗೆ ಸುತ್ತಿಕೊಂಡ ಧ್ವಜವನ್ನು ಬಗಲಲ್ಲಿ ಇಟ್ಟುಕೊಂಡು  ಪಬ್ ಹಾಗೂ ಬಾರ್‌ಗಳಿಂದ ಹೊರನಡೆದಿದ್ದರು. ಬೃಹತ್ ಪರದೆಯ ಮುಂದೆ ಕುಳಿತು ಪಂದ್ಯ ನೋಡಿದವರು ಅಲ್ಲಿಯೇ ಕಣ್ಣೀರು ಹಾಕುತ್ತಾ  ಮುಖ ಮುಚ್ಚಿಕೊಂಡಿದ್ದರು. ಅಂದಗಾತಿಯರು ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದು, ಅವರ ಕೆನ್ನೆಗಳು ಕೆಂಪಗಾಗಿ ಹೋಗಿದ್ದವು!

ಸ್ಪೇನ್ ಫುಟ್‌ಬಾಲ್‌ನ `ಸುವರ್ಣಯುಗ~” ಕೀವ್ (ಐಎಎನ್‌ಎಸ್): ಇದೇ ಸ್ಪೇನ್‌ನ ಸಾರ್ವಕಾಲಿಕ ಶ್ರೇಷ್ಠ ತಂಡ ಎಂದು ಬಣ್ಣಿಸಿರುವ ಕೋಚ್ ವಿಸೆಂಟ್ ಡೆಲ್ ಬಾಸ್ವಿಕ್ ಅವರು `ಸುವರ್ಣಯುಗ~ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಳೆದ ಆರು ವರ್ಷಗಳ ಅವಧಿಯಲ್ಲಿ ಸ್ಪೇನ್ ತಂಡಕ್ಕಾಗಿ ಆಡಿದ ಆಟಗಾರರನ್ನು ಕೊಂಡಾಡಿದ ಅವರು `ಈ ಅವಧಿಯಲ್ಲಿ ತಂಡವು ತೋರಿದ ಪ್ರಗತಿ ಅಚ್ಚರಿ ಮೂಡಿಸುವಂಥದ್ದು~ ಎಂದು ಸೋಮವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.