ADVERTISEMENT

ಕಬಡ್ಡಿ ಪ್ರೀಮಿಯರ್ ಲೀಗ್: ಹೈದರಾಬಾದ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ವಿಜಯವಾಡ: ಹೈದರಾಬಾದ್ ಹಾರ್ಸಸ್ ತಂಡದವರು ಇಲ್ಲಿ ಮುಕ್ತಾಯವಾದ ಕಬಡ್ಡಿ ಪ್ರೀಮಿಯರ್ ಲೀಗ್ (ಕೆಪಿಎಲ್) ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆದರು.

ಡಿಆರ್‌ಆರ್‌ಡಿಇ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಹಾರ್ಸಸ್ ತಂಡ 31-20ಪಾಯಿಂಟ್‌ಗಳಿಂದ ಹರಿದ್ವಾರ ಹಂಟರ್ಸ್ ತಂಡವನ್ನು ಮಣಿಸಿ ಚೊಚ್ಚಲ ಆವೃತ್ತಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ವಿಜಯಿ ತಂಡ 16-5ಪಾಯಿಂಟ್‌ಗಳ ಮುನ್ನಡೆ ಹೊಂದಿತ್ತು.
ನಂತರ ಹಂಟರ್ಸ್ ತಂಡ ಚುರುಕಿನ ಆಟವಾಡಿತಾದರೂ ಗೆಲುವು ಪಡೆಯುವಲ್ಲಿ ಯಶಸ್ಸು ಕಾಣಲಿಲ್ಲ.
ಪ್ರಶಸ್ತಿ ಜಯಿಸಿದ ಹೈದರಾಬಾದ್ ಹಾರ್ಸಸ್ ತಂಡ 10 ಲಕ್ಷ ರೂಪಾಯಿ ನಗದು ಬಹುಮಾನ ಪಡೆದರೆ, ರನ್ನರ್ ಅಪ್ ಸ್ಥಾನ ಪಡೆದ ಹರಿದ್ವಾರ ಹಂಟರ್ಸ್ ತಂಡಕ್ಕೆ 5 ಲಕ್ಷ ರೂಪಾಯಿ ಬಹುಮಾನ ದೊರೆಯಿತು.
ಭಾರತ ರಾಷ್ಟ್ರೀಯ ತಂಡದ ಮಾಜಿ ನಾಯಕ ಕರ್ನಾಟಕದ ಬಿ.ಸಿ. ರಮೇಶ್ ನೇತೃತ್ವದ ಕೃಷ್ಣ ಕಿಂಗ್ಸ್ ತಂಡ ಮೂರನೇ ಸ್ಥಾನ ಗಳಿಸಿ 1.5ಲಕ್ಷ ರೂಪಾಯಿ ಬಹುಮಾನ ಪಡೆಯಿತು.

ಕೆಪಿಎಲ್ ಮೊದಲ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚಾಂಪಿಯನ್ ತಂಡದ ಮನ್‌ಪ್ರೀತ್ ಸಿಂಗ್ `ಟೂರ್ನಿ ಶ್ರೇಷ್ಠ~ ಗೌರವಕ್ಕೆ ಪಾತ್ರರಾದರು.

ವೈಯಕ್ತಿಕ ಪ್ರಶಸ್ತಿಗಳು:
ಉತ್ತಮ ರೈಡರ್ -ವಜೀರ್ ಸಿಂಗ್ (ಡಾ. ಆನಂದ್ ಅಂಗೊಲೆ), ಉತ್ತಮ ಡಿಫೆಂಡರ್-ಪ್ರದೀಪ್ ಕುಮಾರ್ (ಹೈದರಾಬಾದ್ ಹಾರ್ಸಸ್), ಬೆಸ್ಟ್ ಆಲ್‌ರೌಂಡರ್-ರಾಕೇಶ್ (ಹರಿದ್ವಾರ ಹಂಟರ್ಸ್) ಹಾಗೂ ನಿತಿನ್ ಮದಾನಿ (ಹೈದರಾಬಾದ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.