ADVERTISEMENT

ಕರ್ನಾಟಕ ರಿಲೇ ತಂಡಕ್ಕೆ ಚಿನ್ನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಬೆಂಗಳೂರು: ತ್ರಿವೇಣಿ ಹೆಗಡೆ, ಕೆ. ಸೌಮ್ಯ, ಲಲಿತಾ ಹಾಗೂ ನಾಗವೇಣಿ ಅವರನ್ನೊಳಗೊಂಡ ಕರ್ನಾಟಕ ಮಹಿಳಾ ರಿಲೇ ತಂಡ ಭೋಪಾಲ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ನಾಗರಿಕ ಸೇವಾ ಅಥ್ಲೆಟಿಕ್ಸ್ ಕೂಟದ 4x400ಮೀ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿತು.

ಮಧ್ಯ ಪ್ರದೇಶ ಕ್ರೀಡಾ ಇಲಾಖೆ ಆಯೋಜಿಸಿದ್ದ ಈ ಕೂಟದಲ್ಲಿ ಕರ್ನಾಟಕ ರಿಲೇ ತಂಡ ನಿಗದಿತ ಅಂತರವನ್ನು 5:17.3ಸೆಕೆಂಡ್‌ಗಳಲ್ಲಿ ತಲುಪಿ ಚಿನ್ನ ತನ್ನದಾಗಿಸಿಕೊಂಡಿತು.

ಕರ್ನಾಟಕದ ಸ್ಪರ್ಧಿಗಳಾದ ತ್ರಿವೇಣಿ 100ಮೀ ಓಟದಲ್ಲಿ (14.3ಸೆ; ಕಂಚು), 400ಮೀ ಹಾಗೂ 800ಮೀ ಓಟದಲ್ಲಿ ಸೌಮ್ಯ (ಕ್ರಮವಾಗಿ 1:09.8ಸೆ, ಬೆಳ್ಳಿ ಹಾಗೂ 2:47.6ಸೆ, ಕಂಚು), ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕೆ. ಸರಸ್ವತಿ (22.90ಮೀ, ಬೆಳ್ಳಿ) ಜಯಿಸಿದರು.

ಪುರುಷರ ವಿಭಾಗದ ಸ್ಪರ್ಧೆಗಳಲ್ಲಿ ಕರ್ನಾಟಕದ ಮಣಿಕಂಠ 5000 ಹಾಗೂ 10000ಮೀ ಓಟದಲ್ಲಿ (ಕ್ರಮವಾಗಿ 17:11.3ಸೆ ಮತ್ತು 36:25.1ಸೆ. ಎರಡೂ ಬೆಳ್ಳಿ), ಆರ್. ಮುಖೇಶ್ ಬಾಬು 110ಮೀ ಹರ್ಡಲ್ಸ್‌ನಲ್ಲಿ (20.6ಸೆ, ಕಂಚು) ಮತ್ತು ಡಿ. ಹಜರತ್ ಅಲಿ ಪೋಲ್‌ವಾಲ್ಟ್‌ನಲ್ಲಿ (2.75ಮೀ, ಕಂಚು) ಗೆದ್ದುಕೊಂಡಿದ್ದಾರೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ. ಈ ಕೂಟದಲ್ಲಿ ಕರ್ನಾಟಕಕ್ಕೆ ಒಟ್ಟು ಒಂದು ಚಿನ್ನ, 4 ಬೆಳ್ಳಿ ಹಾಗೂ ಕಂಚು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.