ADVERTISEMENT

ಕಾಮನ್‌ವೆಲ್ತ್‌ ಕೂಟ: ಪದಕ ಗೆದ್ದವರಿಗೆ ನಗದು ಬಹುಮಾನ

ಪಿಟಿಐ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಕೆ. ಪಳನಿಸ್ವಾಮಿ
ಕೆ. ಪಳನಿಸ್ವಾಮಿ   

ಚೆನ್ನೈ: ಈ ಸಲದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ನಗದು ಬಹುಮಾನ ಘೋಷಿಸಿದ್ದಾರೆ.

ಪದಕಗಳನ್ನು ಜಯಿಸಿ ಅಮೋಘ ಸಾಧನೆ ಮಾಡಿದ ತಮಿಳುನಾಡಿನ ಸ್ಕ್ವ್ಯಾಷ್‌ ಆಟಗಾರರಾದ ಜೋಷ್ನಾ ಚಿಣ್ಣಪ್ಪ, ದೀಪಿಕಾ ಪಳ್ಳಿಕಲ್‌, ಸೌರವ್‌ ಘೋಷಾಲ್‌, ಟೇಬಲ್‌ ಟೆನಿಸ್‌ ಪಟುಗಳಾದ ಶರತ್‌ ಕಮಲ್‌, ಜ್ಞಾನಶೇಖರನ್‌ ಸತ್ಯನ್‌ ಅವರಿಗೆ ಪತ್ರ ಬರೆದು ಅವರು ಅಭಿನಂದಿಸಿದ್ದಾರೆ.

‘ಎರಡು ಬೆಳ್ಳಿ ಪದಕಗಳನ್ನು ಗೆದ್ದ ದೀಪಿಕಾ ಅವರಿಗೆ ₹60 ಲಕ್ಷ, ಸಿಂಗಲ್ಸ್‌ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಜೋಷ್ನಾ ಹಾಗೂ ಸೌರವ್‌ ಘೋಷಾಲ್‌ ಅವರಿಗೆ ತಲಾ ₹30 ಲಕ್ಷ
ನಗದು ಬಹುಮಾನ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.

ADVERTISEMENT

ಚಿನ್ನದ ಸಾಧನೆ ಮಾಡಿದ ಟೇಬಲ್‌ ಟೆನಿಸ್‌ನ ಪುರುಷರ ತಂಡ ವಿಭಾಗದಲ್ಲಿ ಅಮೋಘ ಸಾಮರ್ಥ್ಯ ಮೆರೆದಿದ್ದ ಶರತ್‌ ಕಮಲ್‌ ಹಾಗೂ ಜ್ಞಾನಶೇಖರನ್‌ ಸತ್ಯನ್‌ ಅವರಿಗೆ ಈ ಮೊದಲು ₹50 ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು. ನಂತರ ನಡೆದ ಟೇಬಲ್‌ ಟೆನಿಸ್‌ನ
ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಹಾಗೂ ಸಿಂಗಲ್ಸ್‌ನಲ್ಲಿ ಕಂಚಿನ ಪದಕಗಳನ್ನು ಶರತ್‌ ಕಮಲ್‌ ಗೆದ್ದಿದ್ದರು. ಇದೇ ಕ್ರೀಡೆಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸತ್ಯನ್‌ ಅವರು ಬೆಳ್ಳಿ ಪದಕ ಜಯಿಸಿದ್ದರು.

‘ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಆಟವಾಡಿದ ಇವರಿಬ್ಬರಿಗೂ ಹೆಚ್ಚಿನ ಬಹುಮಾನ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ಇಬ್ಬರಿಗೂ ಹೆಚ್ಚುವರಿಯಾಗಿ ತಲಾ  ₹50 ಲಕ್ಷ ನೀಡಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.