ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಪದಕ ಕನ್ನಡಿಗ ಗುರುರಾಜ್‌ಗೆ

ಏಜೆನ್ಸೀಸ್
Published 5 ಏಪ್ರಿಲ್ 2018, 4:44 IST
Last Updated 5 ಏಪ್ರಿಲ್ 2018, 4:44 IST
ಬೆಳ್ಳಿ ಪದಕದ ಜತೆ ಗುರುರಾಜ್ – ಚಿತ್ರ ಕೃಪೆ: ಎಪಿ
ಬೆಳ್ಳಿ ಪದಕದ ಜತೆ ಗುರುರಾಜ್ – ಚಿತ್ರ ಕೃಪೆ: ಎಪಿ   

ಗೋಲ್ಡ್‌ಕೋಸ್ಟ್‌: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕನ್ನಡಿಗ ಗುರುರಾಜ್‌ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇದರೊಂದಿಗೆ ಭಾರತ ಮೊದಲ ಪದಕ ಗೆದ್ದಂತಾಗಿದೆ.

ಪುರುಷರ ವಿಭಾಗದ 56 ಕೆ.ಜಿ. ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ್ ಒಟ್ಟು 249 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದ್ದಾರೆ. ಮೊದಲಿಗೆ 111 ಕೆ.ಜಿ. ಭಾರ ಎತ್ತಿದ ಅವರು ನಂತರ 138 ಕೆ.ಜಿ. ಭಾರ ಎತ್ತಿದ್ದಾರೆ.

ಮಲೇಷ್ಯಾದ ಇಜಾರ್ ಅಹ್ಮದ್ ಒಟ್ಟು 261 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಜಯಿಸಿದರೆ, ಶ್ರೀಲಂಕಾದ ಚತುರಂಗ ಲಕ್ಮಲ್ ಕಂಚಿನ ಪದಕ ಗೆದ್ದಿದ್ದಾರೆ.

ADVERTISEMENT

ಗುರುರಾಜ್ ಕುಂದಾಪುರ ತಾಲ್ಲೂಕಿನ ಚಿತ್ತೂರು ಸಮೀಪದ ಜೆಡ್ಡು ಗ್ರಾಮದವರು. ಆಟೋ ರಿಕ್ಷಾ ಚಾಲಕ ಮಹಾಬಲ ಪೂಜಾರಿ ಮತ್ತು ಪದ್ದು ದಂಪತಿಯ ಆರು ಮಕ್ಕಳಲ್ಲಿ ಗುರು ಒಬ್ಬರು. ಆರಂಭಿಕ ದಿನಗಳಲ್ಲಿ ಕುಸ್ತಿ, ಪೋಲ್‌ವಾಲ್ಟ್‌ನಲ್ಲಿ ಆಸಕ್ತಿ ಬೆಳೆಸಿಕೊಡಿದ್ದ ಇವರು ನಂತರ ವೇಟ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.