ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಪರ ಮೊದಲ ಚಿನ್ನ ಗೆದ್ದ ಮೀರಾಬಾಯಿ ಚಾನು

ಏಜೆನ್ಸೀಸ್
Published 5 ಏಪ್ರಿಲ್ 2018, 13:06 IST
Last Updated 5 ಏಪ್ರಿಲ್ 2018, 13:06 IST
ಸಾಯಿಕೋಮ್ ಮೀರಾ ಬಾಯಿ ಚಾನು (ಸಂಗ್ರಹ ಚಿತ್ರ).
ಸಾಯಿಕೋಮ್ ಮೀರಾ ಬಾಯಿ ಚಾನು (ಸಂಗ್ರಹ ಚಿತ್ರ).   

ಗೋಲ್ಡ್‌ಕೋಸ್ಟ್‌: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಸಾಯಿಕೋಮ್ ಮೀರಾ ಬಾಯಿ ಚಾನು ಅವರು 48 ಕೆ.ಜಿ ಮಹಿಳಾ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಭಾರತ ಕ್ರೀಡಾಪಟುಗಳು ಗೆದ್ದ ಎರಡನೇ ಪದಕ ಇದಾಗಿದ್ದು, ಮಹಿಳೆಯರ ವಿಭಾಗದ 48 ಕೆ.ಜಿ. ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಒಟ್ಟು 196 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದರು.

2010ರಲ್ಲಿ ನೈಜೀರಿಯಾ ಮೂಲದ ಆಗಸ್ಟೀನ್‌ ನಿವಾಕೊಲೊ 175 ಕೆ.ಜಿ ಭಾರ ಎತ್ತಿದ ದಾಖಲೆ ಮಾಡಿದ್ದರು. ಇದೀಗ ಮೀರಾಬಾಯಿ, ನಿವಾಕೊಲೊ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ADVERTISEMENT

ಮೂಡುಬಿದಿರೆಯಲ್ಲಿ ಜನವರಿಯಲ್ಲಿ ನಡೆದ 70ನೇ ರಾಷ್ಟ್ರಮಟ್ಟದ ಪುರುಷ ಹಾಗೂ 33ನೇ ಮಹಿಳಾ ಸೀನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮಣಿಪುರದ ಮೀರಾ ಬಾಯಿ ಚಿನ್ನ ಟ್ರಿಪಲ್ ಸಾಧನೆ ಮಾಡಿದ್ದರು. ಜತೆಗೆ, ಅಮೆರಿಕದಲ್ಲಿ ನಡೆದಿದ್ದ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.