ADVERTISEMENT

ಕಿಂಗ್ಸ್‌ ಇಲೆವೆನ್‌ ಗೆಲುವಿನ ಓಟ

​ಪ್ರಜಾವಾಣಿ ವಾರ್ತೆ
Published 19 ಮೇ 2014, 19:32 IST
Last Updated 19 ಮೇ 2014, 19:32 IST
ಅಕ್ಷರ್‌ ಪಟೇಲ್‌
ಅಕ್ಷರ್‌ ಪಟೇಲ್‌   

ನವದೆಹಲಿ (ಪಿಟಿಐ): ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಐಪಿಎಲ್‌ ಟೂರ್ನಿಯಲ್ಲಿ ಮತ್ತೊಂದು ಗೆಲುವು ಪಡೆದು ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಫಿರೋಜ್ ಷಾ ಕೋಟ್ಲಾ ಕ್ರೀಡಾಂ ಗಣದಲ್ಲಿ ಸೋಮವಾರ ನಡೆದ ಪಂದ್ಯ ದಲ್ಲಿ ಜಾರ್ಜ್‌ ಬೇಲಿ ಬಳಗ ನಾಲ್ಕು ವಿಕೆಟ್‌ಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು ಮಣಿಸಿತು.

ಕೆವಿನ್‌ ಪೀಟರ್‌ಸನ್‌ ಬಳಗಕ್ಕೆ ಎದುರಾದ ಸತತ ಏಳನೇ ಸೋಲು ಇದು. ಮೊದಲು ಬ್ಯಾಟ್‌ ಮಾಡಿದ ಡೇರ್‌ ಡೆವಿಲ್ಸ್‌ 20 ಓವರ್‌ಗಳಲ್ಲಿ 7 ವಿಕೆ ಟ್‌ಗೆ 164 ರನ್‌ ಗಳಿಸಿತು. ಕಿಂಗ್ಸ್‌ ಇಲೆ ವೆನ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 165 ರನ್‌ ಗಳಿಸಿ ಜಯ ಸಾಧಿಸಿತು.

ಕಾರ್ತಿಕ್‌ ಆಸರೆ: ಡೇರ್‌ಡೆವಿಲ್ಸ್‌ ತಂಡ ಮುರಳಿ ವಿಜಯ್‌ (5) ಅವರನ್ನು ಬೇಗನೇ ಕಳೆದುಕೊಂಡಿತು. ದಿನೇಶ್‌ ಕಾರ್ತಿಕ್‌ ಮತ್ತು ಕೆವಿನ್‌ ಪೀಟರ್‌ಸನ್‌ ತಂಡಕ್ಕೆ ಆಸರೆಯಾದರು. ಕಾರ್ತಿಕ್‌ 44 ಎಸೆತಗಳಲ್ಲಿ 7 ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದಂತೆ 69 ರನ್‌ ಸಿಡಿಸಿದರು. ಪೀಟರ್‌ಸನ್‌ (49, 32ಎಸೆತ, 6 ಬೌಂಡರಿ, 1 ಸಿಕ್ಸರ್‌)  ಮತ್ತು ಕಾರ್ತಿಕ್‌  ಜೋಡಿ ಎರಡನೇ ವಿಕೆಟ್‌ಗೆ 71 ರನ್‌ ಕಲೆ ಹಾಕಿತು.

ಅಕ್ಷರ್‌ ಪಟೇಲ್ ಓವರ್‌ನಲ್ಲಿ ಪೀಟರ್‌ಸನ್‌ ಔಟಾದ ನಂತರ ಕಾರ್ತಿಕ್‌ ಜೊತೆ ಸೇರಿದ ಜೀನ್‌ ಪಾಲ್ ಡುಮಿನಿ ಉತ್ತಮ ಬೆಂಬಲ ನೀಡಿದರು. ಮೂರನೇ ವಿಕೆಟ್‌ಗೆ 56 ರನ್‌ ಪೇರಿಸಿದ ಈ ಜೋಡಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.
ಕೊನೆಯಲ್ಲಿ ಪಂಜಾಬ್‌ ಬೌಲರ್‌ಗಳ ಎದುರು ಡೆವಿಲ್ಸ್‌ ಬ್ಯಾಟ್ಸ್‌ಮನ್‌ಗಳು ಜಿದ್ದಿಗೆ ಬಿದ್ದವರಂತೆ ವಿಕೆಟ್‌ ಒಪ್ಪಿಸಿದ ಕಾರಣ ರನ್‌ ವೇಗ ಕುಸಿಯಿತು.

ಕೊನೆಯ 18 ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್‌ ಕಳೆದುಕೊಂಡಿದ್ದೇ ಇದಕ್ಕೆ ಸಾಕ್ಷಿ. ಸಂದೀಪ್‌ ಶರ್ಮ ಮತ್ತು ಬ್ಯೂರನ್‌ ಹೆಂಡ್ರಿಕ್ಸ್‌ ತಲಾ ಮೂರು ವಿಕೆಟ್‌ ಉರುಳಿಸಿ ಕುಸಿತಕ್ಕೆ ಕಾರಣರಾದರು. ವೋಹ್ರಾ, ಅಕ್ಷರ್‌ ಪಟೇಲ್‌ ನೆರವು: ಸಾಧಾರಣ ಗುರಿ ಬೆನ್ನಟ್ಟಿದ ಕಿಂಗ್ಸ್‌ ಇಲೆವೆನ್‌ಗೆ ವೀರೇಂದ್ರ ಸೆಹ್ವಾಗ್‌ (23, 22 ಎಸೆತ) ಮತ್ತು ಮನನ್‌ ವೋಹ್ರಾ (42, 19 ಎಸೆತ, 4 ಬೌಂ, 3 ಸಿಕ್ಸರ್‌)  ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 67 ರನ್‌ ಸೇರಿಸಿತು.

ಪ್ರಮುಖ ಆಟಗಾರರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಡೇವಿಡ್‌ ಮಿಲ್ಲರ್‌ ಬೇಗನೇ ಔಟಾದ ಕಾರಣ ತಂಡ ಅಲ್ಪ ಒತ್ತಡಕ್ಕೆ ಒಳಗಾಯಿತು. ಆದರೆ ಅಕ್ಷರ್‌ ಪಟೇಲ್‌ (42, 35 ಎಸೆತ, 5 ಬೌಂ, 1 ಸಿಕ್ಸರ್‌) ಅಜೇಯ ಆಟದ ಮೂಲಕ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.