ADVERTISEMENT

ಕಿಂಗ್ಸ್ ಇಲೆವೆನ್‌ಗೆ ಗೆಲುವಿನ ತವಕ

ಸನ್‌ರೈಸರ್ಸ್ ತಂಡಕ್ಕೆ ಬೌಲರ್‌ಗಳೇ ಬಲ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST
ಬಲಿಷ್ಠ ಬೌಲರ್‌ಗಳನ್ನು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ಶುಕ್ರವಾರ ನಡೆಯಲಿರುವ ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ವಿಶ್ವಾಸ ಹೊಂದಿದೆ
ಬಲಿಷ್ಠ ಬೌಲರ್‌ಗಳನ್ನು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ಶುಕ್ರವಾರ ನಡೆಯಲಿರುವ ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ವಿಶ್ವಾಸ ಹೊಂದಿದೆ   

ಹೈದರಾಬಾದ್ (ಪಿಟಿಐ): ವಿಶ್ವದ ಅಗ್ರ ರ‌್ಯಾಂಕ್‌ನ ಬೌಲರ್ ಡೇಲ್ ಸ್ಟೇಯ್ನ, ಐಪಿಎಲ್‌ನಲ್ಲಿ ಮೂರು ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿರುವ ಅಮಿತ್ ಮಿಶ್ರಾ, ಜೊತೆಗೆ ಇಶಾಂತ್ ಶರ್ಮ ಹಾಗೂ ತಿಸ್ಸಾರ ಪೆರೇರಾ... ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಈ ಬೌಲರ್‌ಗಳ ಬಲ ಸಾಕಲ್ಲವೇ?

ಶುಕ್ರವಾರ ರಾತ್ರಿ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಆಡಲು ಕಣಕ್ಕಿಳಿಯಲಿರುವ ಸನ್‌ರೈಸರ್ಸ್ ತಂಡಕ್ಕೆ ಬೌಲರ್‌ಗಳೇ ಬಲ.

ಬುಧವಾರ ಪುಣೆಯಲ್ಲಿ ನಡೆದ ಪುಣೆ ವಾರಿಯರ್ಸ್ ಎದುರು ಸನ್‌ರೈಸರ್ಸ್ ಅಚ್ಚರಿ ಗೆಲುವು ಸಾಧಿಸಲು ಕಾರಣವಾಗಿದ್ದು ಬೌಲರ್‌ಗಳು. ಅಲ್ಪ ಗುರಿ ಎದುರು ವಾರಿಯರ್ಸ್ ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. 16.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು. ಆಗ ಗೆಲುವಿಗಾಗಿ 19 ಎಸೆತಗಳಿಂದ 19 ರನ್ ಬೇಕಿದ್ದವು.

ಆದರೆ ಸ್ಟೇಯ್ನ ಹಾಗೂ ಮಿಶ್ರಾ ಅವರ ಅಮೋಘ ಬೌಲಿಂಗ್ ಪ್ರದರ್ಶನದ ಕಾರಣ ಸನ್‌ರೈಸರ್ಸ್ ಗೆಲುವು ಸಾಧಿಸಿತ್ತು.  ಹಾಗಾಗಿ ಸನ್‌ರೈಸರ್ಸ್ ತಂಡ ತನ್ನ ಬೌಲರ್‌ಗಳ ಮೇಲೆ ಹೆಚ್ಚು ಭರವಸೆ ಇಟ್ಟುಕೊಂಡಿದೆ. ಆದರೆ ಈ ತಂಡದ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ತೋರುತ್ತಿಲ್ಲ.   ಆದ್ದರಿಂದ ಈ ವಿಭಾಗವೂ ಬಲಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT