ADVERTISEMENT

ಕುರ್ಚಿ, ಟಿ.ವಿ ಖರೀದಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2016, 19:30 IST
Last Updated 3 ಆಗಸ್ಟ್ 2016, 19:30 IST
ಒಲಿಂಪಿಕ್‌ ಟೆನಿಸ್‌ ಸೆಂಟರ್‌ನ ನೋಟ  ಎಎಫ್‌ಪಿ ಚಿತ್ರ
ಒಲಿಂಪಿಕ್‌ ಟೆನಿಸ್‌ ಸೆಂಟರ್‌ನ ನೋಟ ಎಎಫ್‌ಪಿ ಚಿತ್ರ   

ರಿಯೊ ಡಿ ಜನೈರೊ (ಪಿಟಿಐ):   ಒಲಿಂ ಪಿಕ್‌ ಕ್ರೀಡಾಗ್ರಾಮದಲ್ಲಿ ಟಿ.ವಿ ಸೆಟ್‌ ಮತ್ತು ಕುರ್ಚಿಗಳ ಕೊರತೆ ಇವೆ ಆದ್ದ ರಿಂದ ಇವುಗಳನ್ನು ನೀಡಬೇಕೆಂದು ಮಾಡಿಕೊಂಡಿದ್ದ ಮನವಿಗೆ ಸಂಘಟ ಕರು ಸ್ಪಂದಿಸದ ಕಾರಣ ಭಾರತ ತಂಡ ಇವುಗಳನ್ನೆಲ್ಲಾ ಹೊಸದಾಗಿ ಖರೀದಿ ಸಲು ಮುಂದಾಗಿದೆ.

ಎದುರಾಳಿ ತಂಡದ ಹಾಕಿ ಪಂದ್ಯ ಗಳನ್ನು ನೋಡಲು ನಮಗೆ  ಕೆಲ ಟಿ.ವಿ ಸೆಟ್‌ಗಳ ಅಗತ್ಯವಿದೆ.  ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಇಲ್ಲಿರುವ ಕುರ್ಚಿಗಳಲ್ಲಿ ಆಟಗಾರರು ಕುಳಿತರೆ ಬೆನ್ನು ನೋವು ಬರುವ ಸಾಧ್ಯತೆ ಯಿದೆ ಎಂದು ಭಾರತ ಹಾಕಿ ತಂಡದ ಮುಖ್ಯ ಕೋಚ್‌ ರೋಲಂಟ್‌ ಓಲ್ಟಮಸ್‌ ದೂರಿದ್ದರು. ಈ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು  ಚೆಫ್‌ ಡಿ ಮಿಷನ್‌ ರಾಕೇಶ್‌ ಗುಪ್ತಾ ಅವರಿಗೆ ಪತ್ರ ಕೂಡ ಬರೆದಿದ್ದರು.

‘ಸೌಲಭ್ಯಗಳನ್ನು ಒದಗಿಸುವಂತೆ ಓಲ್ಟಮಸ್‌ ಅವರು ಮಾಡಿಕೊಂಡಿದ್ದ ಮನವಿಗೆ ಒಲಿಂಪಿಕ್‌ ಸಂಘಟಕರು ಸ್ಪಂದಿಸಿಲ್ಲ. ಆದ್ದರಿಂದ ನಾವೇ ಟಿ.ವಿ ಸೆಟ್‌ಗಳನ್ನು ಖರೀದಿಸಲು ನಿರ್ಧರಿಸಿ ದ್ದೇವೆ’ ಎಂದು ಗುಪ್ತಾ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಖರೀದಿಸಿ: ನಿಮ್ಮ ಬೇಡಿಕೆಗೆ ತಕ್ಕಂತೆ ಸೌಲಭ್ಯಗಳನ್ನು ಕೊಡಲು ಆಗುವುದಿಲ್ಲ ಎಂದು ಸಂಘಟಕರ ಪ್ರತಿನಿಧಿಯೊಬ್ಬರು  ಹೇಳಿದ್ದಾರೆ.
‘ಚೆಫ್‌ ಡಿ ಮಿಷನ್ ಅವರು ತಂಗುವ ಕೊಠಡಿಯಲ್ಲಿ ಟಿ.ವಿ ಸೌಲಭ್ಯವಿದೆ. ಟಿ.ವಿಗಳನ್ನು ಇಡಲೆಂದೇ ಪ್ರತ್ಯೇಕ ಸೌಲಭ ಮಾಡಿದ್ದೇವೆ.

ಅಂತರರಾಷ್ಟ್ರೀಯ ಒಲಿಂಪಿಕ್‌ ಕೌನ್ಸಿಲ್‌ (ಐಒಸಿ) ನಿಯಮಗಳ ಅನ್ವಯವೇ ಕುರ್ಚಿ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ. ಹೆಚ್ಚುವರಿಯಾಗಿ ನಿಮಗೆ ಬೇಕಾದರೆ ಖರೀದಿಸಿ’ ಎಂದು ಆ ಪ್ರತಿನಿಧಿ ತಿಳಿಸಿದ್ದಾರೆ.

ಭಾರತದ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಗುಪ್ತಾ ‘ನಿಮಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಪ್ರತಿ ಮಹಡಿಗೂ ಟಿವಿ ಸೆಟ್‌ ಮತ್ತು ಹೆಚ್ಚುವರಿ ಕುರ್ಚಿಗಳನ್ನು  ಖರೀದಿಸಲಿದ್ದೇವೆ. ಇದಕ್ಕಾಗಿ ಇಲ್ಲಿರುವ ಭಾರತದ ರಾಯಭಾರಿ ಕಚೇರಿಯ ನೆರವು ಪಡೆದಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.