ನವದೆಹಲಿ (ಪಿಟಿಐ): ಆಯ್ಕೆ ಟ್ರಯಲ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಕುಸ್ತಿಪಟು ಗೀತಿಕಾ ಜಖಾರ್ ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಕ್ರೀಡಾ ಸಚಿವಾಲಯ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)ನಿಂದ ವಿವರಣೆ ಕೋರಿದೆ.
ಮುಂದಿನ ತಿಂಗಳು ಫಿನ್ಲೆಂಡ್‌ನ ಹೆಲ್ಸಿಂಕಿಯಲ್ಲಿ ನಡೆಯಲಿರುವ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ತಂಡ ಕಳುಹಿಸಲು ಕಳೆದ ವಾರ ಆಯ್ಕೆ ಟ್ರಯಲ್ಸ್ ನಡೆಸಲಾಗಿತ್ತು. ಇದರಲ್ಲಿ ಗೀತಿಕಾ ಆಯ್ಕೆ ಆಗಿದ್ದರು. ಆದರೆ ಕುಸ್ತಿ ಫೆಡರೇಷನ್ ಮತ್ತೆ ಆಯ್ಕೆ ಟ್ರಯಲ್ಸ್ ಹಮ್ಮಿಕೊಂಡಿದೆ. ಇದನ್ನು ಪ್ರತಿಭಟಿಸಿ ಗೀತಿಕಾ ದೂರು ನೀಡಿದ್ದರು.
`ತಮ್ಮ ವಿಭಾಗದಲ್ಲಿ ಮಾತ್ರ ಮತ್ತೆ ಟ್ರಯಲ್ಸ್ ಆಯೋಜಿಸಲು ಫೆಡರೇಷನ್ ಮುಂದಾಗಿದೆ ಎಂದು ಗೀತಿಕಾ ದೂರು ನೀಡಿದ್ದಾರೆ. ಏಪ್ರಿಲ್ 19ರಂದು ನಡೆದ ಮೊದಲ ಟ್ರಯಲ್ಸ್‌ನಲ್ಲಿ ಅವರು ಆಯ್ಕೆ ಆಗಿದ್ದರು. ಹರಿಯಾಣದ ಗೀತಿಕಾ ಉ.ಪ್ರದೇಶದ ಸ್ಪರ್ಧಿಯನ್ನು ಸೋಲಿಸಿದ್ದರು~ ಎಂದು ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಎ.ಕೆ.ಪ್ಯಾಟ್ರೊ ಅವರು ಕುಸ್ತಿ ಫೆಡರೇಷನ್ ಕಾರ್ಯದರ್ಶಿ ರಾಜ್ ಸಿಂಗ್‌ಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.