ADVERTISEMENT

ಕುಸ್ತಿ: ಸೆಮಿಫೈನಲ್‌ಗೆ ಫಳಕೆ, ಕಾಟೆ, ಚನಾಳ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಜಮಖಂಡಿ: ಸ್ಥಳೀಯ ಪೈಲ್ವಾನ್ ಆನಂದ ಫಳಕೆ, ಧಾರವಾಡ ಎಸ್‌ಟಿಸಿಯ ಸಂದೀಪ ಕಾಟೆ, ಯಲಹಟ್ಟಿಯ ಹನುಮಂತ ಚನಾಳ ಹಾಗೂ ಕೆಎಸ್‌ಪಿಯ ಲೋಕೇಶ ಯಲಶೆಟ್ಟಿ, ಇಲ್ಲಿನ ಆಲಗೂರ ಗ್ರಾಮದಲ್ಲಿ ಶ್ರೀ ಹನುಮಾನ್ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘದ ಆಶ್ರಯದ ರಾಜ್ಯಮಟ್ಟದ ಕುಸ್ತಿಯ ಪುರುಷರ 74 ಕೆ.ಜಿ. ವಿಭಾಗದ `ಜೈ ಹನುಮಾನ್ ಕೇಸರಿ~ ಪ್ರಶಸ್ತಿಯ ಸೆಮಿಫೈನಲ್ ಹಂತ ತಲುಪಿದರು.

ಸಂದೀಪ ಕಾಟೆ, ಅಥಣಿಯ ಶಿವಾಜಿ ರೇಡೆಕರ ಅವರನ್ನು ಮಣಿಸಿದರೆ ಹನುಮಂತ ಚನಾಳ, ಸಗರೆಪ್ಪ ಹನಗೋಜಿ ಅವರನ್ನು ಸೋಲಿಸಿದರು. ಆನಂದ ಫಳಕೆ, ಹಾರೂಗೇರಿಯ ಚಂಬಾ ಪುಜಾರಿ ಅವರ ವಿರುದ್ಧ ಜಯ ಸಾಧಿಸಿದರು. ಲೋಕೇಶ ಯಲಶೆಟ್ಟಿ ವಿರುದ್ಧ ಸೆಣಸಬೇಕಾಗಿದ್ದ ದಾವಣಗೆರೆಯ ಕಾರ್ತಿಕ ಕಾಟೆ ಕಣಕ್ಕೆ ಇಳಿಯಲೇ ಇಲ್ಲ.

ಫಲಿತಾಂಶ:
ಪುರುಷರು: 38 ಕೆ.ಜಿ. ವಿಭಾಗ: ಈರಯ್ಯ ಮಠಪತಿ ಮತ್ತು  ಅರ್ಜುನ ಹಲಕುರ್ಕಿ (ಕ್ರೀಡಾಶಾಲೆ ಬಾಗಲಕೋಟೆ), ಗುತ್ಯೆಪ್ಪ (ಕ್ರೀಡಾಶಾಲೆ ದಾವಣಗೆರೆ), ಕಾರ್ತಿಕ ಹಿಟ್ಟಂಗಿ (ಕ್ರೀಡಾಶಾಲೆ ಬೆಳಗಾವಿ).

32 ಕೆ.ಜಿ.: ಶ್ರೀಧರ ಗಸ್ತಿ (ಗೋಕಾಕ ಫಾಲ್ಸ್), ಸಚಿನ್ ಅಂಬೋಜಿ (ಕ್ರೀಡಾಶಾಲೆ ಬೆಳಗಾವಿ), ಸದಾಶಿವ ನಲವಡೆ (ಕ್ರೀಡಾಶಾಲೆ ಬಾಗಲಕೋಟೆ), ಮಹೇಶ ಪಿ. ಗೌಡ (ಕ್ರೀಡಾಶಾಲೆ ದಾವಣಗೆರೆ).

30 ಕೆ.ಜಿ.: ಸಂತೋಷ ಡಂಗಿ (ಕ್ರೀಡಾ ಹಾಸ್ಟೆಲ್ ಬಾಗಲಕೋಟೆ), ಎಚ್. ಪ್ರಹ್ಲಾದ ಬೈರು (ಕ್ರೀಡಾ ಹಾಸ್ಟೆಲ್ ಬೆಳಗಾವಿ), ಜಗದೀಶ ನೇಸೂರ (ಚಿಮ್ಮಡ), ಮಂಜು ಡಂಗಿ (ಮುಧೋಳ).

50 ಕೆ.ಜಿ. ವಿಭಾಗ: ಮಲ್ಲಿಕಾರ್ಜುನ ಝಳಕಿ (ಯಲ್ಲಟ್ಟಿ), ವಿಠ್ಠಲ ಲಾಯನ್ನವರ (ತುಳಸಿಗೇರಿ), ಶಿವಾನಂದ ತಳವಾರ, ದಸ್ತಗೀರ ಮುಲ್ತಾನಿ (ಇಬ್ಬರೂ ಕ್ರೀಡಾ ಹಾಸ್ಟೆಲ್ ಬೆಳಗಾವಿ), ನಿಂಗಪ್ಪ ಮಠಪತಿ (ಕ್ರೀಡಾಶಾಲೆ ಬಾಗಲಕೋಟೆ), ಮಂಜುನಾಥ ಬ್ಯಾಕೋಡ (ಎಸ್‌ಟಿಸಿ ಧಾರವಾಡ), ಕೆಂಚಪ್ಪ (ಕ್ರೀಡಾ ಹಾಸ್ಟೆಲ್‌ದಾವಣಗೆರೆ), ರಾಜೇಶ ಎನ್ (ಕ್ರೀಡಾ ಹಾಸ್ಟೆಲ್ ದಾವಣಗೆರೆ).

46 ಕೆ.ಜಿ.: ಸಿ. ಮಲ್ಲಿಕಾರ್ಜುನ (ಜಮಖಂಡಿ), ಸಂತೋಷ ಹರಪಾಳೆ, ಎಸ್. ಅರುಣಕುಮಾರ (ಇಬ್ಬರೂ ಕ್ರೀಡಾಶಾಲೆ ಬಾಗಲಕೋಟೆ), ಆಕಾಶ, ವೆಂಕಟೇಶ ಡಿ.ಎಸ್ (ಇಬ್ಬರೂ ಕ್ರೀಡಾ ಹಾಸ್ಟೆಲ್ ದಾವಣಗೆರೆ), ಮಹೇಶ ಕಾಂಬಳೆ (ಮುಧೋಳ),  ತೌಸೀಫ್ ನದಾಫ (ಕ್ರೀಡಾ ಹಾಸ್ಟೆಲ್ ಬೆಳಗಾವಿ), ಮಂಜುನಾಥ ಡಿ (ಎಸ್‌ಟಿಸಿ ಧಾರವಾಡ).

42 ಕೆ.ಜಿ.: ವಿನೋದ ಬಳಿಗಾರ (ಚಿಮ್ಮಡ), ಪರಪ್ಪ ಶಿರಹಟ್ಟಿ (ಎಸ್‌ಟಿಸಿ ಧಾರವಾಡ), ಬಾಹುಬಲಿ ಶಿರಹಟ್ಟಿ,  ಶ್ರವಣಕುಮಾರ ಹಾದಿಮನಿ  (ಇಬ್ಬರೂ ಕ್ರೀಡಾಶಾಲೆ ಬಾಗಲಕೋಟೆ), ವಿಶ್ವನಾಥ ಹೆಗಡೆ (ಕುಂಬಾರಹಳ್ಳ), ಕೃಷ್ಣಾ ಗಸ್ತಿ (ಹಾರೂಗೇರಿ), ಸುನೀಲ ತನಾಬ (ಕ್ರೀಡಾ ಹಾಸ್ಟೆಲ್ ಬೆಳಗಾವಿ), ಅಜೀತ ತೊನಶ್ಯಾಳ (ಕ್ರೀಡಾಶಾಲೆ ಬೆಳಗಾವಿ).

35 ಕೆ.ಜಿ.: ಮಹೇಶ ಬುಜಂಗ (ಬನಹಟ್ಟಿ), ರವಿ ಬಳೋಲ ಹಾಗೂ ನಿಂಗಪ್ಪ ಓಲೇಕಾರ (ಕ್ರೀಡಾಶಾಲೆ ಗದಗ), ಅಂಜನಪ್ಪ (ಕ್ರೀಡಾ ಹಾಸ್ಟೆಲ್ ದಾವಣಗೆರೆ), ಕುತುಬು ಆಸಂಗಿ, ಬಸವರಾಜ ಮರೇಗುದ್ದಿ  ಹಾಗೂ ಹನಮಂತ ಹೊಸಹಟ್ಟಿ (ಕ್ರೀಡಾಶಾಲೆ ಬಾಗಲಕೋಟೆ), ಸಚಿನ್ ಕಾಂಬಳೆ.

28 ಕೆ.ಜಿ.: ಡಿ.ಅರುಣಕುಮಾರ, ಸಿ.ವಿಶ್ವನಾಥ (ಕ್ರೀಡಾ ಹಾಸ್ಟೆಲ್ ದಾವಣಗೆರೆ), ಪ್ರಶಾಂತಗೌಡ ಬೆಲೇರಿ (ಗದಗ), ಹನಮಂತ ಗುಂಡಿ ಮತ್ತು ಮಾಳಿಂಗರಾಯ (ಕ್ರೀಡಾ ಹಾಸ್ಟೆಲ್ ಬಾಗಲಕೋಟೆ), ದತ್ತಾತ್ರೇಯ ಶೂರ್ಪಾಲಿ ಮತ್ತು ಜ್ಯೋತಿಬಾ ಜಾಂಬೂರೆ (ಮುಧೋಳ), ಸುನೀಲ ಯರಗಟ್ಟಿ (ಕ್ರೀಡಾಶಾಲೆ ಬಾಗಲಕೋಟೆ).

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.