ADVERTISEMENT

ಕೆಎಸ್‌ಪಿ ತಂಡಕ್ಕೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 18:30 IST
Last Updated 12 ಮಾರ್ಚ್ 2011, 18:30 IST

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡದವರು ಇಲ್ಲಿ ನಡೆಯುತ್ತಿರುವ ‘ಪ್ರೊ. ಎನ್.ಸಿ. ಪರಪ್ಪ ಸ್ಮಾರಕ’ ರಾಜ್ಯ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೆಎಸ್‌ಪಿ 55-34 ರಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ಮಣಿಸಿತು. ಯೋಗೇಶ್ (13) ಮತ್ತು ರಾಮಕೃಷ್ಣ (12) ಅವರು ಕೆಎಸ್‌ಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇತರ ಪಂದ್ಯಗಳಲ್ಲಿ ಎಂಇಜಿ ತಂಡ 58-50 ರಲ್ಲಿ ಎಚ್‌ಎಎಲ್ ವಿರುದ್ಧವೂ, ಎಎಸ್‌ಸಿ 58-46 ರಲ್ಲಿ ಯಂಗ್ ಓರಿಯನ್ಸ್ ಮೇಲೂ, ಜೆಎಸ್‌ಸಿ  70-63 ರಲ್ಲಿ ಸದರ್ನ್ ಬ್ಲೂಸ್ ಎದುರೂ ಗೆಲುವು ಪಡೆದವು.

ಕೌಶಲ್ (25) ಮತ್ತು ಸುಜನ್ (19) ಅವರು ಜೆಎಸ್‌ಸಿ ಪರ ಉತ್ತಮ ಪ್ರದರ್ಶನ ನೀಡಿದರು. ವಿರಾಮದ ವೇಳೆಗೆ ವಿಜಯಿ ತಂಡ 30-37 ರಲ್ಲಿ ಹಿನ್ನಡೆ ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.