ADVERTISEMENT

ಕೆಕೆಆರ್‌ ತಂಡಕ್ಕೆ ಕಾರ್ತಿಕ್‌ ನಾಯಕ

ಕಿಂಗ್ಸ್ ಇಲೆವನ್‌ ಪಂಜಾಬ್‌ ತಂಡದ ಕೋಚ್‌ ಆಗಿ ಬ್ರಾಡ್ ಹಾಗ್ ನೇಮಕ

ಪಿಟಿಐ
Published 4 ಮಾರ್ಚ್ 2018, 19:53 IST
Last Updated 4 ಮಾರ್ಚ್ 2018, 19:53 IST
ದಿನೇಶ್ ಕಾರ್ತಿಕ್‌
ದಿನೇಶ್ ಕಾರ್ತಿಕ್‌   

ಮುಂಬೈ: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್‌) ಕೋಲ್ಕತ್ತ ನೈಟ್‌ ರೈಡರ್ಸ್ ತಂಡವನ್ನು ಮುನ್ನಡೆಸುವರು. ರಾಬಿನ್ ಉತ್ತಪ್ಪ ಅವರು ಉಪನಾಯಕನಾಗಿ ಆಡಲಿದ್ಧಾರೆ.

ನೇಮಕದ ನಂತರ ಮಾತನಾಡಿದ ಕಾರ್ತಿಕ್‌ ‘ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮಾದರಿಯಲ್ಲಿ ನಾಯಕತ್ವದ ಹೊಣೆಯನ್ನು ನಿರ್ವಹಿಸಲು ಪ್ರಯತ್ನಿಸುವುದಾಗಿ ಹೇಳಿದರು.

‘ವಿರಾಟ್ ಕೊಹ್ಲಿ ನಿಜವಾದ ನಾಯಕ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಅವರು ವೈಯಕ್ತಿಕವಾಗಿಯೂ ಸಾಮರ್ಥ್ಯ ಮೆರೆಯುತ್ತಾರೆ. ಮಾತನಾಡುವುದಕ್ಕಿಂತ ಮಾಡಿ ತೋರಿಸುವ ಆಟಗಾರ ಅವರು. ಇದೇ ಹಾದಿಯಲ್ಲಿ ನಾನೂ ನಡೆಯುತ್ತೇನೆ’ ಎಂದು ಹೇಳಿದರು.

ADVERTISEMENT

ಕಿಂಗ್ಸ್‌ ತಂಡದ ಕೋಚ್‌ ಸ್ಥಾನಕ್ಕೆ ಬ್ರಾಡ್: ಇಂಡಿಯನ್ ಪ್ರೀಮಿಯರ್ ಲೀಗ್‌ನ ಫ್ರಾಂಚೈಸ್‌ ಕಿಂಗ್ಸ್ ಇಲೆವನ್‌ ಪಂಜಾಬ್‌ ನೆರವು ಸಿಬ್ಬಂದಿಯ ವಿವರಗಳನ್ನು ಭಾನುವಾರ ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ ಬ್ರಾಡ್ ಹಾಗ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಮುಖ್ಯ ಕೋಚ್‌ ಆಗಿ ನೇಮಕ ಮಾಡಿದೆ.

ಕರ್ನಾಟಕದ ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್‌ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಭಾರತ ಕಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದರು.

ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ಹೇಳಿಕೊಂಡಿದ್ದರು.

ದೆಹಲಿ ಆಟಗಾರ ಮಿಥುನ್ ಮನ್ಹಾಸ್ ಅವರನ್ನು ಸಹಾಯಕ ಕೋಚ್ ಆಗಿ ನೇಮಕ ಮಾಡಲಾಗಿದೆ. ನಿಶಾಂತ್‌ ಠಾಕೂರ್‌ ಮತ್ತು ಶ್ಯಾಮಲ್‌ ವಲ್ಲಭ್‌ಜಿ ಅವರು ಫಿಟ್‌ನೆಸ್‌ ಸಿಬ್ಬಂದಿಯಾಗಿರುವರು.

ವೆಂಕಟೇಶ್ ಪ್ರಸಾದ್‌ ಬೌಲಿಂಗ್ ಕೋಚ್
ಕರ್ನಾಟಕದ ಹಿರಿಯ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಬೌಲಿಂಗ್‌ ಕೋಚ್ ಆಗಿ ನೇಮಕಗೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.