ADVERTISEMENT

ಕೆನ್ಯಾದಲ್ಲಿ ತರಬೇತಿ ಪಡೆದ ಸಾಯ್‌ ಅಥ್ಲೀಟ್‌ಗಳು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2015, 19:30 IST
Last Updated 10 ಸೆಪ್ಟೆಂಬರ್ 2015, 19:30 IST

ನವದೆಹಲಿ (ಪಿಟಿಐ): ಸಾಯ್ ಮಧ್ಯಮ ಮತ್ತು ದೂರ ಅಂತರದ ಆರು ಓಟಗಾರರಿಗೆ ಕೆನ್ಯಾದಲ್ಲಿ ಐದು ವಾರಗಳ ಉನ್ನತಮಟ್ಟದ ತರಬೇತಿ ನೀಡಲಾಯಿತು.

ಈ ವಿಶೇಷ ಶಿಬಿರದಲ್ಲಿ ಆರು ಅಥ್ಲೀಟ್‌ಗಳು ಭಾಗವಹಿಸಿದ್ದರು. ಭಾರತದ ಎಲ್ಲ ಸಾಯ್ ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿದ ನಂತರ 16ರಿಂದ 23 ವರ್ಷದೊಳಗಿನ ಆರು ಅಥ್ಲೀಟ್‌ಗಳನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು ಒಂದು ಸಾವಿರ ಅಥ್ಲೀಟ್‌ಗಳ ಟ್ರಯಲ್ಸ್‌ ಮಾಡಲಾಗಿತ್ತು. 

ಅಭಿಷೇಕ್ ಪಾಲ್, ಪೂಲನ್ ಪಾಲ್, ಹರ್ಷದ್ ಮಾತ್ರೆ, ಮುರಳಿ ಗಾವಿಟ್,ಪ್ರೀತಿ ಲಂಬಾ ಮತ್ತು ಸಂಗೀತಾ ಯಾದವ್ ಅವರು ಆಯ್ಕೆಯಾಗಿದ್ದರು. ಮುಖ್ಯ ಕೋಚ್ ಹುಗೊ ವಾನ್ ಡೆನ್ ಬ್ರೊಯೆಕ್ ಅವರು ಮಾರ್ಗದರ್ಶನ ನೀಡಿದ್ದರು.  ‘ಕೆನ್ಯಾ ದಲ್ಲಿ ಉತ್ತಮವಾದ ತರಬೇತಿ ನೀಡಲಾಯಿತು.

ಓಟಗಾರರು ಹೊಸ ಕೌಶಲಗಳನ್ನು ಕಲಿತರು. ಅಲ್ಲಿಯ ಹವಾಮಾನವೂ ಉತ್ತಮವಾಗಿದ್ದ ಕಾರಣ ತರಬೇತಿಗೆ ಯಾವುದೇ ಅಡ್ಡಿಯಾಗಲಿಲ್ಲ’ ಎಂದು ಸಾಯ್ ಕೋಚ್ ಸುರೀಂದರ್ ಪಾಲ್ ಹೇಳಿದರು.

‘ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಅತಿ ಹೆಚ್ಚು ಮಧ್ಯಮ ಮತ್ತು ದೂರ ಅಂತರದ ಓಟಗಾರರು ಕೆನ್ಯಾ ದೇಶದಿಂದ ಬರುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT