ADVERTISEMENT

ಕೊಕ್ಕೊ: ಪಯೋನಿಯರ್ಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST

ಗುಲ್ಬರ್ಗ: ಬೆಂಗಳೂರಿನ ಪಯೋನಿಯರ್ಸ್‌ ತಂಡವು ಕರ್ನಾಟಕ ರಾಜ್ಯ ಕೊಕ್ಕೊ ಸಂಸ್ಥೆ ವತಿಯಿಂದ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಗುಲ್ಬರ್ಗ ಜಿಲ್ಲಾ ಕೊಕ್ಕೊ ಸಂಸ್ಥೆ ಹಾಗೂ ಜಿಲ್ಲಾ ಒಲಿಂಪಿಕ್ ಸಂಸ್ಥೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕೊಕ್ಕೊ ಟೂರ್ನಿಯಲ್ಲಿ 18 ವರ್ಷ ವಯೋಮಿತಿಯ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು.

ಇಲ್ಲಿನ ಎಸ್. ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ಮೈದಾನದಲ್ಲಿ ಸೋಮವಾರ ನಡೆದ ಫೈನಲ್‌ನಲ್ಲಿ ವಿಜಯಿ ತಂಡವು ಹಾಸನದ ಹಾಸನಾಂಬ ತಂಡದ ವಿರುದ್ಧ 9-7, 12-09ರಿಂದ ಗೆಲುವು ಸಾಧಿಸಿತು. ಪಯೋನಿಯರ್ಸ್‌ ಪರ ಬಸವರಾಜು ಮತ್ತು ಬಾಲಾಜಿ ಗಮನ ಸೆಳೆದರು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಟಿ. ನರಸಿಪುರದ ನವೋದಯ ಕ್ಲಬ್‌ನ ಆಟಗಾರ್ತಿಯರು ಕೆಕೆಒ ಕ್ಯಾತನಹಳ್ಳಿ ತಂಡದ ವಿರುದ್ಧ  7-4, 6-4ರಿಂದ ಗೆದ್ದರು. ನವೋದಯ ಪರ ವೀಣಾ ಮತ್ತು ಮೇಘಾ ಉತ್ತಮವಾಗಿ ಆಡಿ ಗೆಲುವಿನ ರೂವಾರಿ ಎನಿಸಿದರು.

ಬಾಲಕಿಯರ ವಿಭಾಗದಲ್ಲಿ ನವೋದಯ ಕ್ಲಬ್‌ನ ವೀಣಾ ಆಲ್‌ರೌಂಡ್ ಪ್ರಶಸ್ತಿ, ಮೇಘಾ ಉತ್ತಮ ದಾಳಿಗಾರ್ತಿ ಪ್ರಶಸ್ತಿ, ಕ್ಯಾತನಹಳ್ಳಿಯ ಪ್ರಫುಲ್ಲ ಉತ್ತಮ ಡಾಡ್ಜರ್ ಪ್ರಶಸ್ತಿ ಪಡೆದರು. ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಬಾಲಾಜಿ ಆಲ್‌ರೌಂಡರ್‌ಪ್ರಶಸ್ತಿ,  ಹಾಸನದ ಸುದರ್ಶನ ಉತ್ತಮ ದಾಳಿಗಾರ ಪ್ರಶಸ್ತಿ, ಶಿವಮೊಗ್ಗ ತಂಡದ ಅಶೋಕ ಉತ್ತಮ ಡಾಡ್ಜರ್ ಪ್ರಶಸ್ತಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.