ADVERTISEMENT

ಕೊಹ್ಲಿ–ಅನುಷ್ಕಾ ಮದುವೆ: ಅಭಿಮಾನಿಗಳ ‘ಸಂಭ್ರಮ’

ಏಜೆನ್ಸೀಸ್
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ಅಮೃತಸರದ ಕಲಾವಿದ ಜಗಜೋತ್ ಸಿಂಗ್‌ ರೂಬಲ್‌ ಅವರು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಜೋಡಿಯ ಚಿತ್ರ ಬರೆದು ಶುಭ ಕೋರಿದರು –ಪಿಟಿಐ ಚಿತ್ರ
ಅಮೃತಸರದ ಕಲಾವಿದ ಜಗಜೋತ್ ಸಿಂಗ್‌ ರೂಬಲ್‌ ಅವರು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಜೋಡಿಯ ಚಿತ್ರ ಬರೆದು ಶುಭ ಕೋರಿದರು –ಪಿಟಿಐ ಚಿತ್ರ   

ಮುಂಬೈ: ಕ್ರಿಕೆಟ್‌ ಲೋಕದ ಮಿಂಚು ವಿರಾಟ್ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರು ಹಸೆಮಣೆ ಏರಿದ ಸಂಭ್ರಮ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿತು. ನವಜೋಡಿಗೆ ವಿವಿಧ ಬಗೆಯಲ್ಲಿ ಶುಭ ಹಾರೈಸಿದರು.

ಕೊಹ್ಲಿ ಮತ್ತು ಅನುಷ್ಕಾ ಇಟಲಿಯ ಮಿಲಾನ್‌ನಲ್ಲಿ ಸೋಮವಾರ ವಿವಾಹಿತರಾಗಿದ್ದರು. ಈ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದರು. ಭಾರತದ ಮುದ್ರಣ ಮಾಧ್ಯಮಗಳಲ್ಲಿ ಮಂಗಳವಾರ ಇದು ಮುಖಪುಟದ ಸುದ್ದಿಯಾಗಿತ್ತು. ಪತ್ರಿಕೆಗಳು ಈ ಮದುವೆಯನ್ನು ವಿವಿಧ ರೀತಿಯಲ್ಲಿ ಬಣ್ಣಿಸಿವೆ.

ಕೆಲವು ಪತ್ರಿಕೆಗಳು ‘ಕ್ಲೀನ್‌ ಬೌಲ್ಡ್‌’ ಎಂದು ಬರೆದಿದ್ದರೆ ಇನ್ನು ಕೆಲವು ಪತ್ರಿಗಳು ಈ ಜೋಡಿಯ ಹೊಸ ಇನಿಂಗ್ಸ್‌ ಆರಂಭವಾಗಿದೆ ಎಂದು ಬರೆದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.