ADVERTISEMENT

ಕ್ರಿಕೆಟ್‌: ಇಂಗ್ಲೆಂಡ್‌ಗೆ ಸರಣಿ ಜಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ನಾರ್ತ್‌ ಸೌಂಡ್‌, ಆ್ಯಂಟಿಗಾ (ಎಎಫ್‌ಪಿ):  ಜೋ ರೂಟ್‌ (107) ಹಾಗೂ ಜಾಸ್‌ ಬಟ್ಲರ್‌ (99) ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ ತಂಡ  ಇಲ್ಲಿ ನಡೆದ ವೆಸ್ಟ್‌ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ 25 ರನ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಆಂಗ್ಲರು ಸರಣಿ ಯನ್ನು 2–1ರಲ್ಲಿ ಗೆದ್ದರು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್‌: 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 303 (ಮೊಯೀನ್‌ ಅಲಿ 55, ಜೋ ರೂಟ್‌ 107, ಜಾಸ್‌ ಬಟ್ಲರ್‌ 99; ಡ್ವೇನ್‌ ಬ್ರಾವೊ 60ಕ್ಕೆ3); ವೆಸ್ಟ್‌ಇಂಡೀಸ್‌: 47.4 ಓವರ್‌ಗಳಲ್ಲಿ 278 (ಡರೆನ್‌ ಬ್ರಾವೊ 16, ಲೆಂಡ್ಲ್‌ ಸಿಮನ್ಸ್‌ 16, ಮಾರ್ಲೊನ್‌ ಸ್ಯಾಮುಯೆಲ್ಸ್‌ 23, ದಿನೇಶ್‌ ರಾಮ್ದಿನ್‌ 128, ಡ್ವೇನ್‌ ಬ್ರಾವೊ 27, ಡರೆನ್‌ ಸಮಿ 24; ಸ್ಟುವರ್ಟ್‌ ಬ್ರಾಡ್‌ 58ಕ್ಕೆ2, ಟಿಮ್‌ ಬ್ರೆಸ್ನನ್‌ 45ಕ್ಕೆ3); ಫಲಿತಾಂಶ: ಇಂಗ್ಲೆಂಡ್‌ಗೆ 25 ರನ್‌ ಹಾಗೂ 2–1ರಲ್ಲಿ ಸರಣಿ ಜಯ. ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ: ಜೋ ರೂಟ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.