ADVERTISEMENT

ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 17:20 IST
Last Updated 16 ಜನವರಿ 2011, 17:20 IST

ಮೆಲ್ಬರ್ನ್: ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ (ಅಜೇಯ 161) ಅವರ ಅದ್ಭುತ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಭಾನುವಾರ ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿದ್ದಾರೆ.

ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ನೀಡಿದ 295 ರನ್‌ಗಳ ಗುರಿಯನ್ನು ಆತಿಥೇಯ ಆಸ್ಟ್ರೇಲಿಯಾ 49.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು.
ವಾಟ್ಸನ್ ಅವರದ್ದು ಬಹುತೇಕ ಏಕಾಂಗಿ ಹೋರಾಟ. 150 ಎಸೆತಗಳನ್ನು ಎದುರಿಸಿದ ಅವರು 12 ಬೌಂಡರಿ ಹಾಗೂ 4 ಸಿಕ್ಸರ್ ಎತ್ತಿದರು. 50ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಎತ್ತಿ ಗೆಲುವು ತಂದುಕೊಟ್ಟರು. 

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 49.4 ಓವರ್‌ಗಳಲ್ಲಿ 294 (ಆ್ಯಂಡ್ರ್ಯೂ ಸ್ಟ್ರಾಸ್ 63, ಸ್ಟೀವ್ ಡೇವಿಸ್ 42, ಕೆವಿನ್ ಪೀಟರ್ಸನ್ 78; ಬ್ರೆಟ್ ಲೀ 43ಕ್ಕೆ2, ಡೇವಿಡ್ ಹಸ್ಸಿ 42ಕ್ಕೆ2, ಮಿಶೆಲ್ ಜಾನ್ಸನ್ 54ಕ್ಕೆ2, ಸ್ಟೀವನ್ ಸ್ಮಿತ್ 12ಕ್ಕೆ2); ಆಸ್ಟ್ರೇಲಿಯಾ: 49.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 297 (ಶೇನ್ ವಾಟ್ಸನ್ ಔಟಾಗದೆ 161, ಬ್ರಾಡ್ ಹಡ್ಡಿನ್ 39, ಮೈಕಲ್ ಕ್ಲಾರ್ಕ್ 36; ಟಿಮ್ ಬ್ರೆಸ್ನಾನ್ 71ಕ್ಕೆ2). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 6 ವಿಕೆಟ್ ಜಯ ಹಾಗೂ 7 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಪಂದ್ಯ ಶ್ರೇಷ್ಠ: ಶೇನ್ ವಾಟ್ಸನ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.