ADVERTISEMENT

ಕ್ರಿಕೆಟ್: ಕರ್ನಾಟಕ ವಿ.ವಿ. ನಿರ್ಗಮನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಮಣಿಪಾಲ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ತಂಡ ರೋಚಕ ಪಂದ್ಯದಲ್ಲಿ ವಾರಂಗಲ್‌ನ ಕಾಕತೀಯ ವಿಶ್ವವಿದ್ಯಾಲಯದ ಎದುರು ಒಂದು ವಿಕೆಟ್ ಅಂತರದಿಂದ ಸೋತು ನಿರಾಶೆ ಅನುಭವಿಸಿತು. ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯಲ್ಲಿ ಕಾಕತೀಯ ವಿ.ವಿ. ಈ ಗೆಲುವಿನಿಂದ ಮುಂದಿನ ಸುತ್ತಿಗೆ ಮುನ್ನಡೆಯಿತು.

ಮಣಿಪಾಲ ವಿ.ವಿ. ಮೈದಾನದಲ್ಲಿ ಶುಕ್ರವಾರ ನಡೆದ ಈ ಪಂದ್ಯದಲ್ಲಿ ಧಾರವಾಡ ನಿಗದಿಪಡಿಸಿದ್ದ 149 ರನ್‌ಗಳ ಗುರಿಯನ್ನು ಬೆಂಬತ್ತಿದ ಕಾಕತೀಯ ವಿ.ವಿ., ಬಿಪಿನ್ (39ಕ್ಕೆ5) ದಾಳಿಗೆ ಸಿಲುಕಿ ಪರದಾಡಿತು. ಆದರೆ ಒಂದು ವಿಕೆಟ್ ಉಳಿದಿರುವಂತೆ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಇನ್ನೊಂದು ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಪೀಠಂ ತಂಡವನ್ನು ಸುಲಭವಾಗಿ ಸೋಲಿಸಿತು.

ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., 106 ರನ್‌ಗಳಿಂದ ಕಲ್ಲಿಕೋಟೆ ವಿ.ವಿ. ತಂಡಕ್ಕೆ ಶರಣಾಯಿತು.

ಎಂಐಟಿ ಮೈದಾನದಲ್ಲಿ ನಡೆದ ಪೈಪೋಟಿಯ ಪಂದ್ಯದಲ್ಲಿ ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿ.ವಿ. ಏಳು ರನ್‌ಗಳಿಂದ ಚೆನ್ನೈನ ಎಸ್‌ಆರ್‌ಎಂ (ಶ್ರೀರಾಮಸ್ವಾಮಿ ಮೆಮೋರಿಯಲ್) ವಿ.ವಿ. ತಂಡವನ್ನು ಮಣಿಸಿತು. ಕೊಟ್ಟಾಯಂ ತಂಡದ ರೋಹಿತ್ ರಜನೀಶ್ ಶತಕ (101, 145 ಎಸೆತ, 3 ಸಿಕ್ಸರ್, 5 ಬೌಂಡರಿ) ಪಂದ್ಯದ ವಿಶೇಷವಾಗಿತ್ತು.

ಇನ್ನೊಂದು ಏಕಪಕ್ಷೀಯ ಪಂದ್ಯದಲ್ಲಿ ಹೈದರಾಬಾದಿನ ಒಸ್ಮಾನಿಯಾ ವಿ.ವಿ. 257 ರನ್‌ಗಳಿಂದ ಚೆನ್ನೈನ ಅಣ್ಣಾ ವಿ.ವಿ. ತಂಡವನ್ನು ಸೋಲಿಸಿತು.

ಸ್ಕೋರುಗಳು: ಎಂಐಟಿ ಮೈದಾನ: ಮಹಾತ್ಮಾ ಗಾಂಧಿ ವಿ.ವಿ., ಕೊಟ್ಟಾಯಂ: 49.2 ಓವರುಗಳಲ್ಲಿ 224 (ರೋಹಿತ್ ರಜನೀಶ್ 101, ಜಾಫ್ರೆ ಜಮಾಲ್ 69; ಅಶ್ವಿನ್ ಕುಮಾರ್ 35ಕ್ಕೆ3); ಎಸ್‌ಆರ್‌ಎಂ ವಿ.ವಿ., ಚೆನ್ನೈ: 50 ಓವರುಗಳಲ್ಲಿ 7 ವಿಕೆಟ್‌ಗೆ 217 (ಆಶಿಷ್ ಕುಮಾರ್ 80, ಕಾರ್ತಿಕ್ ಎಸ್. 32, ಅಶ್ವಿನ್ ಕುಮಾರ್ 29; ಮಹೇಶ್ ಡಿ. 46ಕ್ಕೆ3, ಅಹಮದ್ ಖದೀರ್ 41ಕ್ಕೆ3).

ಮಣಿಪಾಲ ವಿ.ವಿ. ಮೈದಾನ1: ಕರ್ನಾಟಕ ವಿ.ವಿ., ಧಾರವಾಡ: 45.3 ಓವರುಗಳಲ್ಲಿ 149 (ಬಿಪಿನ್ ಕೆ. 38, ನಿತಿನ್ 31; ರಾಕೇಶ್ ಗೌಡ 31ಕ್ಕೆ3, ವಿಶಾಲ್ 17ಕ್ಕೆ3); ಕಾಕತೀಯ, ವಾರಂಗಲ್: 39.2 ಓವರುಗಳಲ್ಲಿ 9 ವಿಕೆಟ್‌ಗೆ 150 (ವಿಶಾಲ್ 23, ರಾಕೇಶ್ ಗೌಡ 25; ಬಿಪಿನ್ 39ಕ್ಕೆ5, ಆದಿತ್ಯ ಪಟೇಲ್ 42ಕ್ಕೆ2, ಹಬೀಬ್ 25ಕ್ಕೆ2).

ಮಣಿಪಾಲ ವಿ.ವಿ. ಮೈದಾನ2: ಅಮೃತ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು: 38.5 ಓವರುಗಳಲ್ಲಿ 122 (ವಿಜಯ್ ಆಂಡ್ರೂಸ್ 28, ಗೋಪು ರಾಜನ್ 24; ಅಜರುದ್ದೀನ್ 36ಕ್ಕೆ2, ಎನ್.ಅಶೋಕ್ 20ಕ್ಕೆ2, ಕುವೆಂಪು ವಿ.ವಿ., ಶಿವಮೊಗ್ಗ: 20.2 ಓವರುಗಳಲ್ಲಿ 2 ವಿಕೆಟ್‌ಗೆ 124 (ಜಯಂತ ಭಟ್ 29, ವಿನೋದ್ ಕೆ.ಎಂ. 47).

ಎಂಜಿಎಂ ಕಾಲೇಜು ಮೈದಾನ: ಕಲ್ಲಿಕೋಟೆ ವಿಶ್ವವಿದ್ಯಾಲಯ: 44 ಓವರುಗಳಲ್ಲಿ 218 (ಕೆ.ಫೌಸಾದ್ 34, ಅಖಿಲ್ ಕೆ.ದಾಸ್ ಔಟಾಗದೇ 44, ಅಜಿತ್ ಬಾಬು 36; ಅಶೋಕ್ 35ಕ್ಕೆ3); ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಬೆಂಗಳೂರು: 36 ಓವರುಗಳಲ್ಲಿ 112 (ವಿನಾಯಕ್ 24; ಪಿ.ಎಸ್.ರಮೇಶ್ 17ಕ್ಕೆ3, ವೈಶಾಖ್ 42ಕ್ಕೆ3).

ಎನ್‌ಐಟಿಕೆ ಮೈದಾನ 2, ಸುರತ್ಕಲ್: ಒಸ್ಮಾನಿಯಾ ವಿ.ವಿ., ಹೈದರಾಬಾದ್: 50 ಓವರುಗಳಲ್ಲಿ 378 (2 ಓವರ್ ಕಡಿಮೆ ಮಾಡಿದ್ದಕ್ಕೆ 28 ದಂಡದ ರನ್ ಸೇರಿ) (ಸುರೇಂದರ್ 72, ರಾಯನ್ 90, ವೈಭವ್ 33) ಅಣ್ಣಾ ವಿ.ವಿ., ಚೆನ್ನೈ: 24.4 ಓವರುಗಳಲ್ಲಿ 121 (ಸುದೇಶ್ 28; ಶ್ರೀವೆಂಕಟೇಶ್ 32ಕ್ಕೆ3, ಪಿ.ಬಿ.ಪರಾಶರ್ 27ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.