ಡ್ಯುನೆಡಿನ್ (ಎಪಿ): ಗ್ರೇಮ್ ಸ್ಮಿತ್ (53) ಮತ್ತು ಹಾಶೀಮ್ ಆಮ್ಲಾ (62) ಗಳಿಸಿದ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲೆಂಡ್ ವಿರುದ್ಧ ಬುಧವಾರ ಆರಂಭವಾದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಸಾಧಾರಣ ಮೊತ್ತ ಪೇರಿಸಿದೆ.
ಯೂನಿವರ್ಸಿಟಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗೆ 191 ರನ್ ಕಲೆಹಾಕಿದೆ. ಮಳೆಯ ಕಾರಣ ಬುಧವಾರ 59 ಓವರ್‌ಗಳ ಆಟ ಮಾತ್ರ ನಡೆಯಿತು.
ಸ್ಕೋರ್: ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 59 ಓವರ್‌ಗಳಲ್ಲಿ 7 ವಿಕೆಟ್‌ಗೆ 191 (ಗ್ರೇಮ್ ಸ್ಮಿತ್ 53, ಹಾಶೀಮ್ ಆಮ್ಲಾ 62, ಜಾಕ್ ರುಡಾಲ್ಫ್ ಬ್ಯಾಟಿಂಗ್ 46, ವೆರ್ನನ್ ಫಿಲಾಂಡರ್ ಬ್ಯಾಟಿಂಗ್ 04, ಕ್ರಿಸ್ ಮಾರ್ಟಿನ್ 34ಕ್ಕೆ 3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.