ADVERTISEMENT

ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ಆಘಾತ; ಜಿಂಬಾಬ್ವೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST

ಹರಾರೆ (ಎಎಫ್‌ಪಿ): ಪ್ರಬಲ ದಕ್ಷಿಣ ಆಫ್ರಿಕಾ ತಂಡಕ್ಕೆ `ಶಾಕ್~ ನೀಡಿದ ಜಿಂಬಾಬ್ವೆ ಇಲ್ಲಿ ಕೊನೆಗೊಂಡ ಟ್ವೆಂಟಿ-20 ಕ್ರಿಕೆಟ್ ತ್ರಿಕೋನ ಸರಣಿಯಲ್ಲಿ ಚಾಂಪಿಯನ್ ಆಯಿತು.ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಜಿಂಬಾಬ್ವೆ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಜಿಂಬಾಬ್ವೆ ಕಳೆದ ಐದು ದಿನಗಳ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಡೆದ ಎರಡನೇ ಗೆಲುವು ಇದಾಗಿದೆ.

ಹ್ಯಾಮಿಲ್ಟನ್ ಮಸಕಜಾ (ಅಜೇಯ 58) ಮತ್ತು ಬ್ರೆಂಡನ್ ಟೇಲರ್ (ಔಟಾಗದೆ 59) ಅವರ ಆಕರ್ಷಕ ಆಟದಿಂದ ಜಿಂಬಾಬ್ವೆ ಅಚ್ಚರಿಯ ಫಲಿತಾಂಶ ನೀಡಿತು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 146 (ಕಾಲಿನ್ ಇನ್‌ಗ್ರಾಮ್ 19, ಫಾಫ್ ಡು ಪ್ಲೆಸಿಸ್ 66, ಅಲ್ಬಿ ಮಾರ್ಕೆಲ್ ಅಜೇಯ 34, ಕೈಲ್ ಜಾರ್ವಿಸ್ 22ಕ್ಕೆ 2). ಜಿಂಬಾಬ್ವೆ: 17.1 ಓವರ್‌ಗಳಲ್ಲಿ 1 ವಿಕೆಟ್‌ಗೆ 150 (ಹ್ಯಾಮಿಲ್ಟನ್ ಮಸಕಜಾ ಅಜೇಯ 58, ವುಸಿ ಸಿಬಾಂಡ 23, ಬ್ರೆಂಡನ್ ಟೇಲರ್ ಔಟಾಗದೆ 59).
 
ಫಲಿತಾಂಶ: ಜಿಂಬಾಬ್ವೆಗೆ 9 ವಿಕೆಟ್ ಗೆಲುವು, ಪಂದ್ಯಶ್ರೇಷ್ಠ: ಬ್ರೆಂಡನ್ ಟೇಲರ್, ಸರಣಿ ಶ್ರೇಷ್ಠ: ಹ್ಯಾಮಿಲ್ಟನ್ ಮಸಕಜಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.