ಚೆನ್ನೈ (ಪಿಟಿಐ): ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಅಂಗಳದಲ್ಲಿ ಮಾಡಿದ್ದು `ಮಾಹಾಮಾನವ~ ಸಾಧನೆ~ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಬಣ್ಣಿಸಿದ್ದಾರೆ.
`ಯಾವುದೇ ಕ್ರಿಕೆಟಿಗನೊಬ್ಬ ಇಂಥ ಸಾಧನೆ ಮಾಡಬಲ್ಲ ಎಂದು ಊಹಿಸಲು ಕೂಡ ಸಾಧ್ಯವಿಲ್ಲದಂಥ ಕಾಲವೊಂದಿತ್ತು. ಆದರೆ ಆ ಅಸಾಧ್ಯವನ್ನು ಸಾಧಿಸಿ ತೋರಿಸಿದ ಶ್ರೇಯ ಸಚಿನ್ ಅವರದ್ದು~ ಎಂದು ಶನಿವಾರ ಇಲ್ಲಿ ತಿಳಿಸಿದರು.
`ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕ ಗಳಿಸಿದ್ದು ಒಂದು ಅದ್ಭುತ. ಇಂಥದೊಂದು ಘಟನೆ ದೇಶದ ಬ್ಯಾಟ್ಸ್‌ಮನ್‌ನಿಂದ ಸಾಧ್ಯವಾಯಿತೆಂದು ಯೋಚಿಸಿದಾಗ ರೋಮಾಂಚನ ಆಗುವುದು ಸಹಜ~ ಎಂದ ಅವರು `ಸಚಿನ್ ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಅಸಮಾನರ ಎದುರು ಆಡಿದ್ದರು.
ಇಮ್ರಾನ್ ಖಾನ್ ಹಾಗೂ ವಾಸೀಮ್ ಅಕ್ರಮ್ ಎದುರು ಯುವ ಆಟಗಾರ ನಿಂತಿದ್ದನ್ನು ನೋಡುವುದೇ ವಿಚಿತ್ರ ಎನಿಸಿತ್ತು. ಆದರೆ ಅಂಥ ಅನೇಕ ಅಸಾಮಾನ್ಯ ಕ್ರಿಕೆಟಿಗರ ನಡುವೆ ನಿರೀಕ್ಷಿಸದಂಥ ಆಟವಾಡಿ ಬೆಳೆದ ಸಚಿನ್ ಮಹಾಮಾನವ ಎಂದೆನಿಸುತ್ತದೆ~ ಎಂದರು.
`ಮೊದಲ ಪಂದ್ಯದಲ್ಲಿಯೇ ಗಾಯಗೊಳ್ಳುತ್ತಾನೆ. ಆದರೆ ಹಿಂಜರಿಯುವುದಿಲ್ಲ. ಡ್ರೆಸಿಂಗ್ ಕೋಣೆಗೆ ಹಿಂದಿರುಗುವುದೂ ಇಲ್ಲ. ಆಟ ಮುಂದುವರಿಸುತ್ತಾನೆ. ಅಲ್ಲಿಂದ ನಿರಂತರ ಆಟ. ಈಗಲೂ ಲಿಟಲ್ ಚಾಂಪಿಯನ್ ಆಟ ಮುಂದುವರಿದಿದೆ. ಇದೇ ಕಲ್ಪನೆಗೆ ನಿಲುಕದ ಸಾಮರ್ಥ್ಯ~ ಎಂದು ಮೆಚ್ಚುಗೆ ಸೂಚಿಸಿದರು.
`ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್‌ನಲ್ಲಿನ ಅಂಗಳ ಹಾಗೂ ವಾತಾವರಣ ಒಂದಕ್ಕೊಂದು ಹೊಂದಿಕೆ ಇಲ್ಲ. ಅಂಥ ವ್ಯತ್ಯಾಸವನ್ನು ಸಮಚಿತ್ತದಿಂದ ಸ್ವೀಕರಿಸಿ ಆಡಿದ್ದೇ ತೆಂಡೂಲ್ಕರ್ ಸಾಗಿದ ಕಠಿಣ ಮಾರ್ಗ~ ಎಂದ ಶ್ರೀಕಾಂತ್ `ಕೆಳಮಟ್ಟದಲ್ಲಿ ತಿರುವು ಪಡೆಯುವಂಥ ಭಾರತದಲ್ಲಿನ ಪಿಚ್‌ಗಳಲ್ಲಿ ಆಡಿ ಬೆಳೆದ ಒಬ್ಬನು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿನ ವೇಗದ ಪಿಚ್‌ಗಳಲ್ಲಿಯೂ ಶತಕದಾಟದ ಸಾಮರ್ಥ್ಯ ತೋರುತ್ತಾನೆ. ಅದೇ ಸಮಾನ ಗುಣವಿಲ್ಲದ ಪರಿಸ್ಥಿತಿಯಲ್ಲಿಯೂ ಸತ್ವಯುತವಾಗಿ ನಿಲ್ಲುವ ಶಕ್ತಿ~ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.