ನವದೆಹಲಿ:ಹಣದ ಹೊಳೆ ಹರಿಸುತ್ತಿರುವ ಕ್ರಿಕೆಟ್‌ಗೂ ಗ್ಲಾಮರಸ್ ಲೋಕ ಬಾಲಿವುಡ್‌ಗೂ ಇರುವ ನಂಟು ಹೊಸದೇನಲ್ಲ. ಐಪಿಎಲ್ ಬಂದ ಮೇಲೆ ಈ ನಂಟು ಮತ್ತಷ್ಟು ಬಲಗೊಂಡಿದೆ. ಆದರೆ ಈಗ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಬಾಲಿವುಡ್ ನಟಿಯರೂ ಭಾಗಿಯಾಗಿದ್ದಾರೆ ಎನ್ನುವ ಆರೋಪ ಅಚ್ಚರಿ ಮೂಡಿಸಿದೆ.
ಬಾಲಿವುಡ್ ನಟಿಯೊಬ್ಬರನ್ನು ಬಳಸಿಕೊಂಡು ಫಿಕ್ಸಿಂಗ್‌ನಲ್ಲಿ ಪಾಲ್ಗೊಳ್ಳಲು ಆಟಗಾರರಿಗೆ ಆಮಿಷಯೊಡ್ಡಲಾಗುತ್ತಿದೆ ಎಂದು ದೆಹಲಿ ಮೂಲದ ಬುಕ್ಕಿ ಬಹಿರಂಗಪಡಿಸಿರುವುದನ್ನು ಲಂಡನ್‌ನ `ದಿ ಸಂಡೇ ಟೈಮ್ಸ~ ಪತ್ರಿಕೆ ಗೋಪ್ಯ ಕಾರ್ಯಾಚರಣೆಯ ವರದಿಯಲ್ಲಿ ಬಹಿರಂಗ ಪಡಿಸಿದೆ. ಅಷ್ಟು ಮಾತ್ರವಲ್ಲದೇ, ಈ ಪತ್ರಿಕೆ ಆ ನಟಿಯ ಚಿತ್ರವನ್ನೂ ಪ್ರಕಟಿಸಿದೆ. `ಫಿಕ್ಸಿಂಗ್‌ನಲ್ಲಿ ಪಾಲ್ಗೊಳ್ಳುವಂತೆ ಆಟಗಾರರ ಮನವೊಲಿಸಲು ಸುಂದರ ಹುಡುಗಿಯರೇ ಸೂಕ್ತ.
ಏಕೆಂದರೆ ಆಟಗಾರರು ಅವರ ಬಲೆಗೆ ಬೇಗ ಬೀಳುತ್ತಾರೆ~ ಎಂದು ಬುಕ್ಕಿ ಹೇಳಿರುವುದನ್ನು ಈ ಪತ್ರಿಕೆ ತಿಳಿಸಿದೆ.
ಆದರೆ ಪತ್ರಿಕೆಯ ಈ ವರದಿಗೆ ನಟಿ ನೂಪುರ್ ಮೆಹ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಹ್ತಾ ನಟಿಸಿದ್ದ 2005ರಲ್ಲಿ ಬಿಡುಗಡೆಯಾದ `ಜೋ ಬೋಲೆ ಸೋ ನಿಹಾಲ್~ ಚಿತ್ರದ ಪೋಸ್ಟರ್‌ನ ಚಿತ್ರವನ್ನು `ದಿ ಸಂಡೇ ಟೈಮ್ಸ~ ಪ್ರಕಟಿಸಿದೆ ಎನ್ನಲಾಗಿದೆ.
ಈ ಸಿನಿಮಾದಲ್ಲಿ ಸನ್ನಿ ಡಿಯೋಲ್ ಹಾಗೂ ಕಮಾಲ್ ಖಾನ್ ಜೊತೆ ಅಭಿನಯಿಸಿದ್ದ ಈ ನಟಿ ಪತ್ರಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿ ವಾಹಿನಿಗಳಿಗೆ ಈ ಕುರಿತು ಪ್ರತಿಕ್ರಿಯಿಸಿರುವ ಮೆಹ್ತಾ `ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ನನ್ನ ಅನುಮತಿ ಇಲ್ಲದೇ ಪತ್ರಿಕೆ ನನ್ನ ಚಿತ್ರ ಪ್ರಕಟಿಸಿದೆ. ಆದರೆ ಮುಖವನ್ನು ಸ್ಪಷ್ಟವಾಗಿ ತೋರಿಸಿಲ್ಲ. ಈ ಫಿಕ್ಸಿಂಗ್‌ಗೂ ನನಗೂ ಯಾವುದೇ ಸಂಬಂಧವಿಲ್ಲ~ ಎಂದು ಸ್ಪಷ್ಟನೆ ನೀಡಿದ್ದಾರೆ.
`ಬಾಲಿವುಡ್ ಹಾಗೂ ಭಾರತದ ಕಲಾವಿದರಿಗೆ ಕೆಟ್ಟ ಹೆಸರು ತರುವ ಉದ್ದೇಶವನ್ನು ಪತ್ರಿಕೆ ಹೊಂದಿದೆ. ಆದ್ದರಿಂದ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ~ ಎಂದು ವಾಹಿನಿಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರತಿಕ್ರಿಯೆ ಸಮಂಜಸವಲ್ಲ: `ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ `ಫಿಕ್ಸ್~ ಆಗಿತ್ತು ಎನ್ನುವ ಮಾಧ್ಯಮದ ವರದಿಗೆ ಪ್ರತಿಕ್ರಿಯೆ ನೀಡುವುದು ಸಮಂಜಸವಲ್ಲ~ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.
`ಮೊಹಾಲಿಯಲ್ಲಿ ನಡೆದ ಪಂದ್ಯ ಫಿಕ್ಸ್ ಆಗಿತ್ತು ಎಂದು ಪತ್ರಿಕೆ ಉಲ್ಲೇಖ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ ಮಾಧ್ಯಮಗಳಲ್ಲಿ ಏನಾದರೂ ಪ್ರಕಟವಾಗಬಹುದು. ಎಲ್ಲದಕ್ಕೂ ಪ್ರತಿಕ್ರಿಯಿಸುವುದು ಸರಿಯಲ್ಲ~ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೋಮವಾರ ತಿಳಿಸಿದರು.
ದೆಹಲಿ ಮೂಲದ ಬುಕ್ಕಿಯೊಬ್ಬರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದರ ಬಗ್ಗೆ ಗಮನ ಸೆಳೆದಾಗ `ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ~ ಎಂದು ಐಪಿಎಲ್ ಮುಖ್ಯಸ್ಥ ಹಾಗೂ ಕೇಂದ್ರ ಸಚಿವರೂ ಆಗಿರುವ ಶುಕ್ಲಾ ಪ್ರತಿಕ್ರಿಯಿಸಿದರು.
ವೆಲಿಂಗ್ಟನ್ ವರದಿ (ಪಿಟಿಐ): `ಕೆಲ ಆಟಗಾರರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನುವ ಪತ್ರಿಕೆಯ ವರದಿ ಆಧಾರ ರಹಿತವಾಗಿದೆ~ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ. ಅಷ್ಟೇ ಅಲ್ಲ ಬೇಜಾವಾಬ್ದಾರಿಯಿಂದ ಕೂಡಿದ ವರದಿ ಎಂದು ಅದು ಟೀಕೆ ಮಾಡಿದೆ.
ತನಿಖೆ ಅಗತ್ಯವಿಲ್ಲ: `ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ಫಿಕ್ಸ್ ಆಗಿರಲಿಲ್ಲ. ಈ ಪಂದ್ಯದ ಕುರಿತು ತನಿಖೆ ಮಾಡಲು ಯಾವ ಕಾರಣವೂ ಇಲ್ಲ~ ಎಂದು ಐಸಿಸಿ ಸ್ಪಷ್ಟವಾಗಿ ಹೇಳಿದೆ.`ಈ ವಿವಾದಕ್ಕೆ ಯಾವುದೇ ಆಧಾರವಿಲ್ಲ. ಈ ಸುದ್ದಿಗೆ ಮಹತ್ವ ನೀಡುವ ಅಗತ್ಯವಿಲ್ಲ~ ಎಂದು ಐಸಿಸಿ ಸಿಇಒ ಹರೂನ್ ಲಾರ್ಗೆಟ್ ಹೇಳಿದ್ದಾರೆ.
ಲಂಡನ್ ವರದಿ (ಪಿಟಿಐ/ಐಎಎನ್‌ಎಸ್): ಪತ್ರಿಕೆ ಪ್ರಕಟಿಸಿರುವ ವರದಿಯ ಮೂಲಕ ಬಯಲಿಗೆ ಎಳೆದಿರುವ ವಿಷಯದ ಸತ್ಯಾಸತ್ಯತೆಯ ಬಗ್ಗೆ ಐಸಿಸಿ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಗ್ರಹಾಮ್ ಗೂಚ್ ಆಗ್ರಹಿಸಿದ್ದಾರೆ.
`ಕ್ರೀಡೆಯಲ್ಲಿ ಪರಿಶುದ್ಧತೆಯನ್ನು ಕಾಪಾಡಬೇಕು. ಈ ವರದಿಯಿಂದ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಅಷ್ಟೇ ಅಲ್ಲ ಆಘಾತವನ್ನೂ ಉಂಟು ಮಾಡಿದೆ~ ಎಂದು ಅವರು ನುಡಿದಿದ್ದಾರೆ.
ಆದ್ದರಿಂದ ಆಟಗಾರರಿಗೆ ಈ ಕುರಿತು ಅರಿವು ಮೂಡಿಸುವುದು ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ ಯುವ ಆಟಗಾರರಿಗೆ~ ಎಂದು ಪ್ರಸ್ತುತ ಇಂಗ್ಲೆಂಡ್‌ನ ಬ್ಯಾಟಿಂಗ್ ಕೋಚ್ ಸಹ ಆಗಿರುವ ಗೂಚ್ ಅಭಿಪ್ರಾಯಪಟ್ಟಿದ್ದಾರೆ.
`ಕೌಂಟಿ ಕ್ರಿಕೆಟ್ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ಆದ್ದರಿಂದ ಹೆಚ್ಚು ತೊಂದರೆ ಇಲ್ಲದೇ ಇಲ್ಲಿ ವ್ಯವಹಾರ ನಡೆಸಬಹುದು. ಭಾರತದ ಬುಕ್ಕಿಗಳೂ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ~ ಎಂದು ಪತ್ರಿಕೆಯು ತನ್ನ ವರದಿಯಲ್ಲಿ ಬಹಿರಂಗ ಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.