ಶ್ರೀನಗರ (ಪಿಟಿಐ): ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಸರಣಿ ನಡೆಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರವನ್ನು ಬೆಂಬಲಿಸಿರುವ ಭಾರತ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ `ರಾಜಕೀಯ ಮತ್ತು ಕ್ರಿಕೆಟ್ ಮಿಶ್ರಣ ಬೇಡ~ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
`ನಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ರಾಜಕೀಯವೇ ಬೇರೆ. ಕ್ರೀಡೆಯೇ ಬೇರೆ. ಆಟಗಾರರೇ ಆಡಲು ಮುಂದಾಗಿರುವಾಗಿ ಅದನ್ನು ವಿರೋಧಿಸುವುದಕ್ಕೆ ನಾವು ಯಾರು?~ ಎಂದು ಬೇಡಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
`ಎರಡೂ ದೇಶಗಳ ತಂಡದವರು ನಿರಂತರವಾಗಿ ಕ್ರಿಕೆಟ್ ಆಡಲಿ. ಇದೊಂದು ಅತ್ಯುತ್ತಮ ಸರಣಿ. ಭಾರತದ ಆಟಗಾರರು ಈ ಸರಣಿಯನ್ನು ಒತ್ತಡದಿಂದಲೇ ಆಡಬೇಕಾಗುತ್ತದೆ. ಏಕೆಂದರೆ, ಇಂಗ್ಲೆಂಡ್ ಎದುರು ಸರಣಿಯನ್ನಾಡಿ ಮರಳಿರುತ್ತಾರೆ. ಯುವರಾಜ್ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಆಗಮಿಸುವುದು ಕಷ್ಟಸಾಧ್ಯ~ ಎಂದು ಬೇಡಿ ನುಡಿದರು.
`ಯುವರಾಜ್ ದೈಹಿಕ ಸಾಮರ್ಥ್ಯದಲ್ಲಿ ಸುಧಾರಣೆ ಕಂಡು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಾರೆ ಎನ್ನುವುದಾದರೆ ಸಂತೋಷ. ನಾನು ಎಡಗೈ ಬ್ಯಾಟ್ಸ್‌ಮನ್‌ನಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಆತನ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ~ ಎಂದು ಬೇಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.