ADVERTISEMENT

ಕ್ರಿಕೆಟ್: ರಾಸ್ ಟೇಲರ್ ಶತಕ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ನೇಪಿಯರ್ (ಎಪಿ): ನಾಯಕ ರಾಸ್ ಟೇಲರ್ (111) ಗಳಿಸಿದ ಅಜೇಯ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಉತ್ತಮ ಮೊತ್ತ ಪೇರಿಸಿದೆ.

ಮೆಕ್‌ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಗುರುವಾರದ ಆಟದ ಅಂತ್ಯಕ್ಕೆ 5 ವಿಕೆಟ್‌ಗೆ 331 ರನ್ ಗಳಿಸಿದೆ. ಬ್ರೆಂಡನ್ ಮೆಕ್ಲಮ್ (83) ಮತ್ತು ಮಾರ್ಟಿನ್ ಗುಪ್ಟಿಲ್ (51) ಮೊದಲ ವಿಕೆಟ್‌ಗೆ 124 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: ಮೊದಲ   ಇನಿಂಗ್ಸ್ 90 ಓವರ್‌ಗಳಲ್ಲಿ 5 ವಿಕೆಟ್‌ಗೆ 331 (ಬ್ರೆಂಡನ್ ಮೆಕ್ಲಮ್ 83, ಮಾರ್ಟಿನ್ ಗುಪ್ಟಿಲ್ 51, ರಾಸ್ ಟೇಲರ್ ಬ್ಯಾಟಿಂಗ್ 111, ಡೇನಿಯಲ್ ವೆಟೋರಿ 38, ಜಾನ್ ವಾಟ್ಲಿಂಗ್ ಬ್ಯಾಟಿಂಗ್ 15. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.